ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಸ್ವಾಮಿ ವಿವೇಕಾನಂದವಿಶ್ವಮಾನ್ಯ ಸಂತರು'

Lingaraj Badiger
Updated On : 6 Feb 2014, 12:45 pm

ಶಹಾಪುರ: ಸತ್ಯ ಸಾಕ್ಷಾತ್ಕಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸುವ, ತ್ಯಾಗವೇ ಆಯುಧವಾಗಿಸಿ, ಧರ್ಮವೇ ಖಡ್ಗವನ್ನಾಗಿಸಿಕೊಂಡ ಯುವ ಪಡೆ ದೇಶಕ್ಕೆ ಬೇಕು ಎಂಬುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು ಎಂದು ಉಪನ್ಯಾಸಕ ಭೀಮಣ್ಣ ಅಂಚೆಸೂಗುರ ಹೇಳಿದರು.
 ತಾಲೂಕಿನ ಗೋಗಿ ಸರ್ಕಾರಿ ಪರ್ಪೂ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 151ನೇ ಜಯಂತಿ ನಿಮಿತ್ತ ಗುಲ್ಬರ್ಗದ ನೆಹರು ಯುವ ಕೇಂದ್ರ,  ಸ್ಥಳೀಯ ಸಪಪೂ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಸಮುದಾಯ ಅಭಿವೃದ್ಧಿ ಹಾಗೂ ನಾಯಕತ್ವ ತರಬೇತಿ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
 ಜೀವನ ಸಂಗ್ರಾಮದಲ್ಲಿ ಎದುರಾಗುವ ನಾನಾ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಬಲ್ಲ, ಹೋರಾಡಬಲ್ಲ ವೀರ ಸ್ವಭಾವದ ಮನುಷ್ಯನಿರಬೇಕು ಎಂದರು.
  ಪ್ರಾಚಾರ್ಯ ಕೆ.ಎಂ.ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಪಂಪಾಪತಿ ಶಿಣರ್, ಸೈಯದ್ ಮುರ್ತುಜಾ ಹುಸೇನ್, ಚಂದ್ರ ಕಟ್ಟಿಮನಿ, ಚಂದ್ರ ಗೋಗಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement