ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

14ರಂದು ಗಂಗಿಲಿಂಗೇಶ್ವರ ಜಾತ್ರೆ

Mainashree
Updated On : 7 Feb 2014, 10:42 am

ಜೇವರ್ಗಿ: ತಾಲೂಕಿನ ಅಂಕಲಗಾ ಗ್ರಾಮದ ಆರಾಧ್ಯ ದೈವ ಗಂಗಿಲಿಂಗೇಶ್ವರರ ಜಾತ್ರಾ ಮಹೋತ್ಸವ ಫೆ. 14ರಂದು ನಡೆಯಲಿದೆ. ಜಾತ್ರೆಯ ಅಂಗವಾಗಿ ಫೆ.6ರಿಂದ 14ರವರೆಗೆ ಪ್ರತಿ ರಾತ್ರಿ 8 ಗಂಟೆಗೆ ಮಹಾತ್ಮಾ ಗೋಲಗೇರಿ ಗೊಲ್ಲಾಳೇಶ್ವರರ ಪುರಾಣವನ್ನು ಜೇರಟಗಿಯ ಮಹಾಂತ ಸ್ವಾಮೀಜಿ ನಡೆಸಿಕೊಡಲಿದ್ದಾರೆ.
ರೇಣುಕ ಗವಾಯಿ ಕೆರೂಟಗಿ, ಶಾಂತಕುಮಾರ ಮಠ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಫೆ. 12ರಂದು ರಾತ್ರಿ   ಜಾನಪದ ಸಾಹಿತ್ಯ ಕುರಿತು ಬಿ.ಎನ್. ಪಾಟೀಲ್ ಉಪನ್ಯಾಸ ನೀಡಲಿದ್ದಾರೆ. ಫೆ.13ರಂದು ರಾತ್ರಿ  ದುಂಡಪ್ಪ ಪೂಜಾರಿ ಅವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ. ಸಂಜೆ ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಫೆ. 14ರಂದು ಸಂಜೆ ದೀಪೋತ್ಸವ, ರಾತ್ರಿ ಪುರಾಣ ಮಂಗಲ ಕಾರ್ಯಕ್ರಮ, ಧರ್ಮಸಭೆ ನಡೆಯಲಿದೆ. ರಾತ್ರಿ 10 ಗಂಟೆಗೆ ಗಂಗಿಲಿಂಗೇಶ್ವರ ಹಾಗೂ ಕರಿದೇವರ ಕರ್ತು ಗದ್ದುಗೆಗೆ ಮಹಾಪೂಜೆ ನೆರವೇರಿಸಲಾಗುವುದು. ರಾತ್ರಿ 10.30 ಗಂಟೆಗೆ ಹೇಳಿಕೆಗಳು ನಡೆಯಲಿವೆ. ನಂತರ ಡೊಳ್ಳಿನ ಪದಗಳು ನಡೆಯಲಿವೆ ಎಂದು ದೇವಸ್ಥಾನ ಟ್ರಸ್ಟ್ ಸಮಿತಿ ಸದಸ್ಯರು ತಿಳಿಸಿದ್ದಾರೆ.

ನಾಳೆ ಸಕಾಲ ಕಾಯ್ದೆ ಜಾಗೃತಿ ಕಾರ್ಯಾಗಾರ
ಗುಲ್ಬರ್ಗ: ಸಕಾಲ ಮಿಷನ್ ಕರ್ನಾಟಕ ಸರ್ಕಾರ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಮತ್ತು ರಾಷ್ಟ್ರೋತ್ಥಾನ ಸಂಕಲ್ಪ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಫೆ. 8ರಂದು ತಾಪಂ ಸಭಾಂಗಣದಲ್ಲಿ ಸಕಾಲ ಕಾಯ್ದೆ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಸಕಾಲ ಕಾಯ್ದೆಯಲ್ಲಿ ಲಭ್ಯವಿರುವ ಸೌಲಭ್ಯಗಳು, ನಿಗದಿತ ಸಮಯಕ್ಕೆ ಯಾವುದೇ ಅಧಿಕಾರಿಗಳಿಗೆ ಹಾಗೂ ಮಧ್ಯವರ್ತಿಗಳಿಗೆ ಲಂಚ ಕೊಡದೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಸುಗಮವಾಗಿ, ಸರಿಯಾದ ಸಮಯಕ್ಕೆ ಸಕಾಲ ಕಾಯ್ದೆ ಉಪಯೋಗಿಸಿ ಹೇಗೆ ಮಾಡಿಕೊಳ್ಳಬಹುದು/ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂತೋಷ ಪಿ. ನರಗುಂದ ಮಾಹಿತಿ ನೀಡಲಿದ್ದಾರೆ. ವಿವರಕ್ಕೆ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ- ಮೊ. 9886672293ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement