ಜಿಪಂ ಸಭಾಂಗಣಕ್ಕೆ ಗ್ರಹಣ ಮೋಕ್ಷ
ಕೊನೆಗೂ ಇಲ್ಲಿನ ಮುಖ್ಯರಸ್ತೆಯಲ್ಲಿ ನೂತನ ಸಭಾಂಗಣ ಜಿಪಂ ಸಾಮಾನ್ಯ ಸಭೆಗೆ ಸಿದ್ಧಗೊಂಡಿದೆ. 2007ರಲ್ಲೇ ಈ ಸಭಾಂಗಣ ನಿರ್ಮಿಸಲಾಗಿತ್ತು. ಇಲ್ಲಿ ಆಸನ ಸೌಕರ್ಯ ಸರಿಯಾಗಿಲ್ಲ, ಕೊರತೆಗಳು ಸಾಕಷ್ಟಿವೆ ಎಂದು ಆಗಿನ ಜಿಪಂ ಆಡಳಿತ ಇಲ್ಲಿ ಸಭೆಯನ್ನೇ ನಡೆಸಿರಲಿಲ್ಲ. ಇದಾದ ನಂತರ ಈ ಸಭಾಂಗಣ 7 ವರ್ಷದಿಂದ ಬಳಕೆಯಾಗಿರಲಿಲ್ಲ. ಮತ್ತೆ ಕಳೆದೊಂದು ವರ್ಷದಿಂದ ಇದರ ನವೀಕರಣ, ಮರುವಿನ್ಯಾಸ ಮಾಡಲಾಯ್ತು.
ಇದೀಗ 2014ರ ಮೊದಲ ವರ್ಷದ ಜಿಪಂ ಸಾಮಾನ್ಯ ಸಭೆ ಗುರುವಾರ ನವೀಕರಣಗೊಂಡ ಸಭಾಂಗಣದಲ್ಲೇ ನಡೆಯಿತು. ಅಧ್ಯಕ್ಷ ರಮೇಶ ಮರಗೋಳ ಸಭಾಂಗಣ ಉದ್ಘಾಟಿಸಿದರು. 2007 ರಲ್ಲಿ ಆಗಿನ ಸಿಎಂ ಕುಮಾರಸ್ವಾಮಿ ಸಭಾಂಗಣ ಉದ್ಘಾಟಿಸಿದ್ದರು. ಕೇವಲ ಸ್ಥಾಯಿ ಸಮಿತಿ ಸಭೆಗಳನ್ನು ನಡೆಸಿ ಸಾಗಹಾಕಲಾಗುತ್ತಿತ್ತು.