ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಿಂಗನಳ್ಳಿ: ತೋಳಗಳ ಹಾವಳಿ ಮುಂದುವರಿಕೆ

Mainashree
Updated On : 7 Feb 2014, 10:43 am

ಶಹಾಪುರ: ತಾಲೂಕಿನ ಸಿಂಗನಳ್ಳಿ ಗ್ರಾಮದಲ್ಲಿನ ನೀಲಮ್ಮ ಎಂಬುವವರು ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ದಾರಿಯಲ್ಲಿ ಒಮ್ಮೆಲೆ ತೋಳಗಳು ಮೇಲೆರಗಿದ್ದು ಮಹಿಳೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.  
ಇದಲ್ಲದೆ 17 ವರ್ಷದ ಹಣಮಂತನ ಮೇಲೆಯೂ ಬುಧವಾರ ತೋಳ ದಾಳಿ ಮಾಡಿದೆ. ಸಿಂಗನಳ್ಳಿ ಗ್ರಾಮದ ಹೊಲದ ಕೆಲಸಕ್ಕೆ ಬಂದಿದ್ದ, ವನದುರ್ಗ ಗ್ರಾಮದ ರೇಣುಕಮ್ಮ ಭೀಮಣ್ಣ ನಗಾರಿ ಮತ್ತು ನರಸಮ್ಮ ಕಾಶಿರಾಜ ಅವರ ಮೇಲೆಯೂ ತೋಳ ಗುರುವಾರ ಸಂಜೆ ದಾಳಿ ನಡೆಸಿದೆ. ಈ ಮಹಿಳೆಯರಿಗೆ ಕೈಬೆರಳುಗಳು ಸೇರಿದಂತೆ ದೇಹದಲ್ಲಿ ಗಂಭೀರ ಗಾಯವಾಗಿದೆ. ಸದ್ಯ ಇವರು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಚ್ಚೆತ್ತ ಗ್ರಾಮಪಂಚಾಯತಿ: ಗ್ರಾಮದ ಸಮೀಪದಲ್ಲಿಯೆ ಪ್ರತ್ಯೇಕ ಎರಡು  ಘಟನೆ ನಡೆದಿದ್ದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಸಿಂಗನಳ್ಳಿ ಗ್ರಾಪಂ.  ಈ ಕುರಿತು ಎಚ್ಚೆತ್ತುಕೊಂಡಿದ್ದು ಅರಣ್ಯ ಇಲಾಖೆಯನ್ನು ಸಂಪರ್ಕಿಸಿದೆ.  ಜನ, ಜಾನುವಾರುಗಳ ಮೇಲೆ ಮನಬಂದಂತೆ ದಾಳಿ ನಡೆಸುತ್ತಿರುವ ತೋಳವನ್ನು ಹಿಡಿಯಲು ಮನವಿ ಮಾಡಾದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement