ಕರ್ನಾಟಕ ಪ್ರಾಂತ ರೈತ ಸಂಘದಿಂದ ಎಪಿಎಂಸಿ ಮುಂದೆ ಪ್ರತಿಭಟನೆ
ಶಹಾಪುರ:- ಕುಸಿದಿರುವ ಶೇಂಗಾ ಬೆಳೆಗೆ 6000 ಸಾವಿರ ರೂ. ಬೆಂಬಲ ಬೇಲೆ ನೀಡಬೇಕು. ತೊಗರಿ ಖರೀದಿ ಕೇಂದ್ರವನ್ನು ತೀವ್ರಗೊಳಿಸಬೇಕು. ಬತ್ತವನ್ನು 2,000 ಸಾವಿರ ರೂ.ಗಳಿಗೆ ಖರೀದಿಸಬೇಕು. ಸಿಸಿಐಯಿಂದ ಹತ್ತಿ ಖರೀದಿಸಬೇಕು. ಎಸ್ಬಿಎಚ್ ಬ್ಯಾಂಕ್ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಎಪಿಎಮ್ಸಿ ಕಚೇರಿ ಮುಂದೆ ಧರಣಿ ನಡೆಸಿತು.
ಈ ಸಂದರ್ಭದಲ್ಲಿ ಕ.ಪ್ರಾ. ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ದವಲ್ ಸಾಬ್ ನದಾಫ್ ಮಾತನಾಡಿ, ರೈತರು ದುಬಾರಿ ಬೆಲೆಯ ಬೀಜ, ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಖಾಸಗಿಯವರಿಂದ ಶೇ. 3ರಿಂದ 5ರ ಬಡ್ಡಿ ನೀಡಿ ಹಾಗೂ ಬ್ಯಾಂಕಿನಿಂದ ಸಾಲ ತಂದು 8,000 ರೂ.ಗೆ 1 ಕ್ವಿಂಟಾಲ್ ಶೇಂಗಾಬೀಜ ತಂದು ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಇನ್ನೊಂದು ಕಡೆ, ಬಿತ್ತಿದ ಬೀಜಕ್ಕೆ ಕಾಡು ಹಂದಿಗಳ ಕಾಟ ಮತ್ತು ಭೂಮಿಯಲ್ಲಿ ರಬ್ಬರ್ ಹುಳುಗಳ ಕಾಟ. ಇಷ್ಟಾದರೂ ಪ್ರತಿ ಎಕರೆಗೆ 30 ಚೀಲ ಶೇಂಗಾ ಬರುತ್ತದೆಂಬ ಕನಸು ಅನೇಕರದಾಗಿದೆ ಎಂದರು.
ಆದರೆ ಕ್ರಿಮಿಕೀಟಗಳ ಹಾವಳಿಯಿಂದ ಕೇವಲ 10 ಚೀಲ ಬೆಳೆ ಕೈಗೆ ಬರುತ್ತಿದೆ. ಆದನ್ನು ಮಾರಲು ಹೋದರೆ ದಲ್ಲಾಳಿಗಳ ಕಾಟದಿಂದ ಬೆಲೆ 6,000 ರೂ ಇದ್ದದ್ದು 2,500 ರಿಂದ 3,000 ರೂ.ಗೆ ಇಳಿಸಿರುವುದರಿಂದ ್ಣಶೇಂಗಾ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ತಕ್ಷಣವೇ ಕುಸಿದಿರುವ ಶೇಂಗಾ ಧಾರಣಗೆ ಸೂಕ್ತ ಬೆಲೆ ನೀಡಬೇಕೆಂದು ಜಿಲ್ಲಾ ಸಂಚಾಲಕ ಎಸ್.ಎಂ. ಸಾಗರ, ತಾಲುಕಾ ಅಧ್ಯಕ್ಷರಾದ ಮಲ್ಲನಗೌಡ ಮಾಲಿಪಾಟೀಲ, ಪ್ರ. ಕಾರ್ಯದರ್ಶಿ ಎಮ್.ಎಸ್. ಗೌಡ, ಸೇರಿದಂತೆ ಅನೇಕ ರೈತ ಮುಖಂಡರು ರೈತರು ಭಾಗವಹಿಸಿದ್ದರು
ತಹಶೀಲದಾರರಿಗೆ ಈ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು. ಎಪಿಎಂಸಿ ಅಧ್ಯಕ್ಷ ತಮ್ಮಣ್ಣಾ ರಾಮಪುರೆ ಹಾಜರಿದ್ದರು.