ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಫಲಾನುಭವಿಗಳಿಗೆ ತಲುಪದ ಯೋಜನೆಗಳು

Vishwanath S
Updated On : 8 Feb 2014, 1:20 am

ಶಹಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ತಾಲೂಕು ಸಮಿತಿ ಶಹಾಪುರ ಇವರ ನೇತೃತ್ವದಲ್ಲಿ ಕೃಷಿ ಕೂಲಿಕಾರರು ಮನೆ, ಭೂಮಿ, ನಿವೇಶನಕ್ಕಾಗಿ 2010ಸಾಲಿನಲ್ಲಿ ನಿವೇಶನರಹಿತರ ವೈಯಕ್ತಿಕ ಅರ್ಜಿ ಸಲ್ಲಿಸಿದ್ದರೂ, ಇಲ್ಲಿವರೆಗೂ ಇತ್ಯರ್ಥಪಡಿಸದೆ ಇರುವದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ ನದಾಫ್ ಉಗ್ರವಾಗಿ ಖಂಡಿಸಿದರು. ಕನರಾಟಕ ಪ್ರಾಂತ ಕಣಷಿ ಕೂಲಿಕಾರರ ಸಂಘ ತಾಲೂಕಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತವಾಗಿ ತಕ್ಷಣವೇ ನಿವೇಶನ ರಹಿತರಿಗೆ ಸರಕಾರ ಭೂಮಿಯನ್ನು ಕರಿದಿಸಿ ಬಡವರಿಗೆ ನಿವೇಶನ ಹಂಚಬೇಕೆಂದು.ಸರಕಾರಿ ಭೂಮಿ ಸಾಗುವಳಿ ಮಾಡಿದ ಬಡ ಕೂಲಿಕಾರ ಸಕ್ರಮಮಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಕೂಲಿಕಾರರು ವಲಸೆ ಹೋಗುವ ಯಾದಗಿರಿ ಜಿಲ್ಲೆಯಾಗಿದೆ. ಇಂತಹ ಪರಸ್ಥಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೆಯಾಗದೆ ಉಳ್ಳವರ ಪಾಲಿಗೆ ವರವಾಗಿದೆ ಬಡವರಪಾಲಿಗೆ ಶಾಪವಾಗಿದೆ. ಯಂತ್ರಗಳ ಬಳಕೆ ಮಾಡುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಈಗಾಗಲೆ 2013 ಫೆಬ್ರವರಿಯಲ್ಲಿ ಕೆಲಸ ಮಾಡಿದ ಗೋನಾಲ ಗ್ರಾ ಪಂ ವ್ಯಾಪ್ತಿಯ ಗೋನಾಲ್, ಶಿವುಪುರ,ಅಗ್ನಿಹಾಳ, ಸೂಗುರು, ಗುಂಡ್ಲೂರು ಗ್ರಾಮದ ಕೂಲಿಕಾರರಿಗೆ ತಕ್ಷಣವೇ ಕೂಲಿ ಕೊಡಬೇಕು ಉದ್ಯೋಗ ಖಾತ್ರಿ ಸಮರ್ಪಕ ಜಾರಿ ಮಾಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಗಳು ತಾಪಂ ಶಹಾಪೂರ ಇವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಸಮಿತಿ ಉಪಾಧ್ಯಕ್ಷ ಪಂಪಣ್ಣ ಹೊಸಮನಿ, ಶಂಕ್ರಪ್ಪ ಮಕ್ತಾಪುರ, ಎಂ.ಬಿ.  ನಾಟೇಕರ, ಸಹಕಾರ್ಯದರ್ಶಿಗಳಾದ ಮಲ್ಲಯ್ಯ ಪೋಲಂಪಲ್ಲಿ, ಸವಿತಾ ಪೂಜಾರಿ, ಸಿದ್ದಣ್ಣಗೌಡ ಪೊಲೀಸ್ ಪಾಟೀಲ್ ಮತ್ತು ಬೂದಿಯಪ್ಪ, ಮಹಿಬುಬ ತಾರಕಾಶ, ಕಾರ್ಯದರ್ಶಿ ನಿಂಗಣ್ಣ ನಾಟೇಕರ ಇತರರು ಭಾಗವಿಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement