ಅಣ್ಣಾ ಅಭಿಮಾನಗಳ ಸೈನ್ಯ ಸ್ಥಾಪನೆ
ಗುಲ್ಬರ್ಗ: ಭ್ರಷ್ಟಾಚಾರ ರಹಿತ ಭಾರತ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಫೆ. 16 ರಂದು ವಿಭಾಗಮಟ್ಟದ ಸಭೆ ಕರೆಯಲಾಗಿದೆ. ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಬೇಕು ಎಂಬ ಕಾರಣಕ್ಕೆ ಹೋರಾಟ ನಡೆಸಿದ ಅಣ್ಣಾಹಜಾರೆ ಅವರ ಕನಸಿನ ಸಾಕಾರಕ್ಕಾಗಿ ಮತ್ತು ಭ್ರಷ್ಟಾಚಾರ ರಹಿತ ಭಾರತ ನಿರ್ಮಾಣಕ್ಕಾಗಿ ಪ್ರಜೆಗಳಲ್ಲಿ ಅದರ ವಿರುದ್ಧ ಸೆಣಸುವ ತಾಕತ್ತು ತುಂಬಲು ಲಕ್ಷ್ಮಣ ಕೋರಿ ನೇತೃತ್ವದಲ್ಲಿ ಅಣ್ಣಾ ಅಭಿಮಾನಗಳ ಸೈನ್ಯವನ್ನು ಆರಂಭಿಸಲಾಗಿದೆ. ಈ ಸಭೆಯಲ್ಲಿ ಸೇರ್ಪಡೆಯಾಗಬಯಸುವವರು ಸಭೆಗೆ ಬರಲು ಸೂಚಿಸಲಾಗಿದೆ. 23 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಭೆ ನಡೆಯಲಿದ್ದು, ಅಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9880125059 ಗೆ ಸಂಪರ್ಕಿಸಲು ಕೋರಲಾಗಿದೆ.
ಇಂದು ಚಿತ್ರ ಸಂತೆ
ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗುಲ್ಬರ್ಗ ಹಾಗೂ ಹೈದ್ರಾಬಾದ್ ಕರ್ನಾಟಕ ಕಲಾ ಸಂಸ್ಥೆಗಳ ಮತ್ತು ಕಲಾವಿದರ ಸಂಯುಕ್ತಾಶ್ರಯದಲ್ಲಿ ಫೆ. 9ರಂದು ಡಾ. ಎಸ್.ಎಂ. ಪಂಡಿತ ರಂಗಮಂದಿರದ ಹತ್ತಿರ ಬೆಳಗ್ಗೆ 9.30 ಗಂಟೆಗೆ ಚಿತ್ರ ಸಂತೆ ಏರ್ಪಡಿಸಲಾಗಿದೆ. ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ ಉದ್ಘಾಟಿಸುವರು. ಗುಲ್ಬರ್ಗ ವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶ್ರೀಕಾಂತ ಕಟ್ಟಿಮನಿ, ಎಸ್.ಎಸ್. ಪಾಟೀಲ್, ರಾಮಗೋಪಾಲ ಮಾಲು, ಬಿ.ಜಿ. ಪಾಟೀಲ್, ಶಂಕರಲಾಲ್ ಗಿಲ್ಡಾ, ಸತೀಶ ಗುತ್ತೇದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನವೋದಯ ಪರೀಕ್ಷೆ ಬರೆದ 312 ವಿದ್ಯಾರ್ಥಿಗಳು
ಹುಣಸಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನವೋದಯ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರದಲ್ಲಿ ಒಟ್ಟು 322 ವಿದ್ಯಾರ್ಥಿಗಳಿಗೆ 17 ಬ್ಲಾಕ್ಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. 10 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ಪರೀಕ್ಷಾ ಕೇಂದ್ರದ ಅಮೀನಸಾಬ ತಿಳಿಸಿದರು. ಶಹಾಪುರದ ನವೋದಯ ವಿದ್ಯಾಲಯದ ಎಸ್.ಎ. ಖಾನ್ ಹಾಜರಿದ್ದು ಪರೀಕ್ಷೆ ಸುಸುತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದರು. ಹುಣಸಗಿ ಪಿಎಸ್ಐ ಮಂಜುನಾಥ ಸಿರಿವೇರಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ನಿಗದಿತ ಸಮಯಕ್ಕೂ ಮುಂಚಿತವಾಗಿ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಪರೀಕ್ಷೆ ಬರೆಯಲು ಆಗಮಿಸುತ್ತಿರುವುದು ಕಂಡು ಬಂದಿತು.
ಅಧ್ಯಕ್ಷರಾಗಿ ವೆಂಕಟೇಶ ಎಂ. ಬೋನೇರ್
ಶಹಾಪುರ: ಕನ್ನಡ ನಾಡು ನುಡಿ, ಜಲ ಸಂಸ್ಕೃತಿ ಹಾಗೂ ಪರಂಪರೆ ರಕ್ಷಣೆಗಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವ ವೆಂಕಟೇಶ ಎಂ.ಬೋನೇರ್ ಅವರನ್ನು ಶಿವರಾಮೇಗೌಡರ ಕರವೇ ಬಣದ ಶಹಾಪುರ ತಾಲೂಕಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪಟ್ಟಣದಲ್ಲಿ ನಡೆದ ಹೆಚ್.ಶಿವರಾಮೇಗೌಡರ ವಿಶೇಷ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ರಾಯಚೂರ ಜಿಲ್ಲಾಧ್ಯಕ್ಷರಾದ ಅಶೋಕ ಕುಮಾರ ಜೈನ್, ಗುಲ್ಬರ್ಗ ಜಿಲ್ಲಾಧ್ಯಕ್ಷ ಮಂಜುನಾಥ ನಾಲ್ವರಕರ್, ಡಾ. ಹಿರೇಮಠ ಕೆಂಭಾವಿ, ರೇವಣಸಿದ್ದಯ್ಯಡೆಂಗಿಮಠ, ಶರಣುಬಿರನೂರು, ಮಲ್ಲಪ್ಪತಳಬಿಡಿ, ಗುರುರಾಜ, ನಿಂಗರಾಜ ಗುಡಗುಂಟಿ, ಸೋಮನಾಥ ಹುಗ್ಗಿ, ಉಮಾರೆಡ್ಡಿ ಹುಂಡೆಕಲ್ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.
ನವೋದಯ ಪರೀಕ್ಷೆ ಬರೆದ 958 ವಿದ್ಯಾರ್ಥಿಗಳು
ಶಹಾಪುರ: ತಾಲೂಕಿನಲ್ಲಿ ನಡೆದ ನವೋದಯ ಸ್ಪರ್ಧಾತ್ಮಕ ಪರೀಕ್ಷೆಗೆ ಒಟ್ಟು 999 ವಿದ್ಯಾರ್ಥಿಗಳಲ್ಲಿ 41 ಗೈರು ಹಾಜರಾಗಿದ್ದು, ಒಟ್ಟು 958 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ರಾಯಪ್ಪರೆಡ್ಡಿ ತಿಳಿಸಿದರು. ಹೋತಪೇಟೆಯ ನವೋದಯ ಶಾಲೆ, ಚರಬಸವೇಶ್ವರ ವಿದ್ಯಾ ಸಂಸ್ಥೆ ಮತ್ತು ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿತ್ತು. 60 ಜನ ಶಿಕ್ಷಕರನ್ನು ಪರೀಕ್ಷೆಗೆ ನಿಯೋಜಿಸಲಾಗಿತ್ತು. ಪರೀಕ್ಷಾ ಆಕ್ರಮ ತಡೆಗಟ್ಟಲು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಶಾಂತಿಯಿಂದ ಪರೀಕ್ಷೆಗಳು ನಡೆದವು.
ದೇವರ ಹೆಸರಲ್ಲಿ ಪ್ರಾಣಿವಧೆ ಬೇಡ: ಶಿವಯ್ಯ ಸ್ವಾಮಿ
ಸೇಡಂ: ಮಾತಾ ಮಾಣಿಕೇಶ್ವರಿಯವರ ದಿವ್ಯ ಸಂದೇಶ ಹಾಗೂ ತತ್ವದಂತೆ ದೇವರ ಹೆಸರಲ್ಲಿ ಪ್ರಾಣಿವಧೆ ನಿಲ್ಲಬೇಕು. ಮೂಢತನವನ್ನು ಬಿಡುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಹೇಳಿದರು.
ತಾಲೂಕಿನ ಯಾನಾಗುಂದಿಯಲ್ಲಿ ಫೆ.7ರಿಂದ ಕರ್ನಾಟಕ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಅಧ್ಯಯನ ಅಕಾಡೆಮಿ ವತಿಯಿಂದ ಆರಂಭವಾಗಿರುವ ಗಂಗಾಮತ ಕೋಲಿ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶದ ಮೊದಲ ದಿನ ಅವರು ಮಾತನಾಡಿದರು. ಅಹಿಂಸೋ ಪರಮೋ ಧರ್ಮ ಎಂಬ ಧ್ಯೇಯದೊಂದಿಗೆ ಸಮಾಜದ ಶಾಂತಿಗಾಗಿ ತಪಸ್ಸು ಮಾಡುತ್ತಿರುವ ಮಾತೆಯವರ ನಡೆ- ನುಡಿಯನ್ನು ಪಾಲಿಸಿದಲ್ಲಿ ವಿಶ್ವ ಶಾಂತಿ ದೊರಕಲಿದೆ ಎಂದು ವಿಶ್ವಶಾಂತಿಗಾಗಿ ಮಾತಾ ಮಾಣಿಕೇಶ್ವರಿ ಅವರ ಸಂದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಮಾಜದ ಒಳಿತಿಗಾಗಿ ಒಗ್ಗಟ್ಟಾಗಿ: ಇದೇ ವೇಳೆ ಗಂಗಾಮತ ಕೋಲಿ ಸಮಾಜದ ರಾಜ್ಯ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ರಾಜ್ಯ ಮಟ್ಟದ ಈ ಸಮಾವೇಶವನ್ನು ಸಮಾಜ ಬಾಂಧವರು ಸೇರಿ ಯಶಸ್ವಿಗೊಳಿಸಬೇಕಾಗಿದೆ ಎಂದರು.
ಕೋಲಿ ಸಮಾಜದ ಚರಿತ್ರೆಯನ್ನು ತಿಳಿಯಲು ಈ ಸಮಾವೇಶ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಹೇಳಿದರು.
ಇಂದು ಸಿಎಂ, ಮೊಯ್ಲಿ ತಾತ್ಕಾಲಿಕ ಪ್ರವಾಸ
ಗುಲ್ಬರ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.9ರಂದು ಬೆ.11.45ಕ್ಕೆ ಗುರಮಠಕಲ್ಗೆ ಆಗಮಿಸಿ, ಮ.12ಕ್ಕೆ ಸೇಡಂ ತಾಲೂಕಿನ ಯಾನಾಗುಂದಿಗೆ ಪ್ರಯಾಣಿಸಿ ಕರ್ನಾಟಕ ರಾಜ್ಯ ಕೋಲಿ-ಕಬ್ಬಲಿಗ-ಗಂಗಾಮತ-ಮೊಗವೀರ ಸಮಾಜದ ರಾಜ್ಯಮಟ್ಟದ ಬೃಹತ್ ಸಮಾವೇಶದ ಉದ್ಘಾಟನೆ ನೆರವೇರಿಸುವರು.
ಮೊಯ್ಲಿ ಸಚಿವರ ಪ್ರವಾಸ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಅರಣ್ಯ, ಪರಿಸರ ಖಾತೆ ಸಚಿವ ಡಾ. ಎಂ.ವೀರಪ್ಪ ಮೊಯ್ಲಿ ಅವರು ಫೆ.9ರಂದು ಬೆ.11.45ಕ್ಕೆ ಗುರುಮಠಕಲ್ಗೆ ಆಗಮಿಸಿ, ಮ.12ಕ್ಕೆ ಯಾನಾಗುಂದಿಗೆ ಪ್ರಯಾಣಿಸಿ ರಾಜ್ಯ ಕೋಲಿ- ಕಬ್ಬಲಿಗ- ಗಂಗಾಮತ- ಮೊಗವೀರ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಇಂದು ವಿಚಾರ ಸಂಕಿರಣ
ಗುಲ್ಪರ್ಗ: ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಘಟಕದ ವತಿಯಿಂದ ಫೆ.9 ರಂದು ಬೆ.11.30 ಗಂಟೆಗೆ ಸೂಪರ್ ಮಾರ್ಕೆಟ್ನಲ್ಲಿರುವ ಚೇಂಬರ್ ಆಫ್ ಕಾಮರ್ಸ್ನಲ್ಲಿ ಜಾತಿ ವ್ಯವಸ್ಥೆ ಮತ್ತು ಶಕ್ತಿ ರಾಜಕಾರಣ ಕುರಿತು ವಿಚಾರಣ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಸಿದ್ದಾರ್ಥ ವಿಹಾರ ಟ್ರಸ್ಟ್ನ ಸಂಘಾನಂದ ಭಂತೇಜಿ ಸಾನ್ನಿಧ್ಯ ವಹಿಸುವರು. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ಘಾಟಿಸುವರು. ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಅಧ್ಯಕ್ಷತೆ ವಹಿಸುವರು. ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ, ಜೇವರ್ಗಿ ಶಾಸಕ ಡಾ. ಅಜಯಸಿಂಗ್, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಉಪಾಧ್ಯಕ್ಷೆ ಅನಿತಾ ಪಿ. ವಳಕೇರಿ, ಮಾಪಣ್ಣ ಗಂಜಗಿರಿ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅನಿರ್ದಿಷ್ಟಾವಧಿ
ಧರಣಿಗೆ ನಿರ್ಧಾರ
ಗುಲ್ಬರ್ಗ: ಅಂಗನವಾಡಿ ಕೇಂದ್ರಗಳ ಖಾಸಗೀಕರಣ ವಿರೋಧಿಸಿ ಕನಿಷ್ಠ ಕೂಲಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಜಿಲ್ಲಾ ಕಚೇರಿ ಎಂದು ಅನಿರ್ದಿಷ್ಟಾವಧಿ ಕಾಲ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಗುಲ್ಬರ್ಗ ಜಿಲ್ಲಾ ಅಂಗನವಾಡಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರವೇ ಪ್ರತಿಭಟನೆ
ಗುಲ್ಬರ್ಗ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ ಹೈ-ಕ ಭಾಗದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಶರಣು ಗದ್ದುಗೆ, ಗುರುರಾಜ, ಮಂಜನೂರು ಕುಸುನೂರ ಇದ್ದರು
ಮೇಳಕ್ಕೆ ಆಯ್ಕೆ
ಗುಲ್ಬರ್ಗ: ತಾಲೂಕಿನ ಆಲಗೂಡ ಗ್ರಾಮದ ಬೊಮ್ಮಗೊಂಡೇಶ್ವರ ಜಾನಪದ ಡೊಳ್ಳಿನ ಸಂಘ ಜಿಲ್ಲಾ ಯುವ ಜನ ಮೇಳದಲ್ಲಿ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬಳ್ಳಾರಿಯಲ್ಲಿ ಜರುಗಲಿರುವ ವಿಭಾಗ ಮಟ್ಟದ ಯುವಜನ ಮೇಳಕ್ಕೆ ಆಯ್ಕೆಯಾಗಿದೆ. ಸಂಘದ ಅಧ್ಯಕ್ಷ ಶಿವರಾಯ ಅಂಕಲಗಿ, ಕಾರ್ಯದರ್ಶಿ ಪೀರಪ್ಪ ಕಲ್ಬುರ್ಗಿ ಹಾಗೂ ಗುಂಡೇರಾವ ಅಂಕಲಬಗಿ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅರ್ಜಿ ಆಹ್ವಾನ
ಗುಲ್ಬರ್ಗ: ಭಾರತ ಸರ್ಕಾರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಯೋಜನೆಯಡಿಯಲ್ಲಿ ವಿಶ್ವಾಸ್ ಇನ್ಫೋಟೆಕ್ನಿಂದ ಒಂದು ತಿಂಗಳ ಉಚಿತ ಕಂಪ್ಯೂಟರ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಫೆ.20ರೊಳಗಾಗಿ ವ್ಯವಸ್ಥಾಪಕ ನಿರ್ದೇಶಕರು, ವಿಶ್ವಾಸ್ ಇನ್ಫೋಟೆಕ್, ಜಾವಳಕರ್ ಕಾಂಪ್ಲೆಕ್ಸ್, ಲಾಲಗೇರಿ ಕ್ರಾಸ್, ಶಹಾಬಜಾರ್ ರೋಡ್, ಗುಲ್ಬರ್ಗ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಕೋರಿದೆ.
ಹುಣಸಗಿ: ನವೋದಯ ಪರೀಕ್ಷೆ ಬರೆದ 312 ವಿದ್ಯಾರ್ಥಿಗಳು
ಹುಣಸಗಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನವೋದಯ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರದಲ್ಲಿ ಒಟ್ಟು 322 ವಿದ್ಯಾರ್ಥಿಗಳಿಗೆ 17 ಬ್ಲಾಕ್ಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. 10 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು ಎಂದು ಪರೀಕ್ಷಾ ಕೇಂದ್ರದ ಅಮೀನಸಾಬ ತಿಳಿಸಿದರು. ಶಹಾಪುರದ ನವೋದಯ ವಿದ್ಯಾಲಯದ ಎಸ್.ಎ. ಖಾನ್ ಹಾಜರಿದ್ದು ಪರೀಕ್ಷೆ ಸುಸುತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದರು. ಹುಣಸಗಿ ಪಿಎಸ್ಐ ಮಂಜುನಾಥ ಸಿರಿವೇರಿ ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ನಿಗದಿತ ಸಮಯಕ್ಕೂ ಮುಂಚಿತವಾಗಿ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಪರೀಕ್ಷೆ ಬರೆಯಲು ಆಗಮಿಸುತ್ತಿರುವುದು ಕಂಡು ಬಂದಿತು.
ಕರವೇ ತಾಲೂಕಾಧ್ಯಕ್ಷರಾಗಿ ಬೋನೇರ್
ಶಹಾಪುರ: ಕನ್ನಡ ನಾಡು ನುಡಿ, ಜಲ ಸಂಸ್ಕೃತಿ ಹಾಗೂ ಪರಂಪರೆ ರಕ್ಷಣೆಗಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿರುವ ವೆಂಕಟೇಶ ಎಂ.ಬೋನೇರ್ ಅವರನ್ನು ಶಿವರಾಮೇಗೌಡರ ಕರವೇ ಬಣದ ಶಹಾಪುರ ತಾಲೂಕಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪಟ್ಟಣದಲ್ಲಿ ನಡೆದ ಹೆಚ್.ಶಿವರಾಮೇಗೌಡರ ವಿಶೇಷ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ರಾಯಚೂರ ಜಿಲ್ಲಾಧ್ಯಕ್ಷರಾದ ಅಶೋಕ ಕುಮಾರ ಜೈನ್, ಗುಲ್ಬರ್ಗ ಜಿಲ್ಲಾಧ್ಯಕ್ಷ ಮಂಜುನಾಥ ನಾಲ್ವರಕರ್, ಡಾ. ಹಿರೇಮಠ ಕೆಂಭಾವಿ, ರೇವಣಸಿದ್ದಯ್ಯಡೆಂಗಿಮಠ, ಶರಣುಬಿರನೂರು, ಮಲ್ಲಪ್ಪತಳಬಿಡಿ, ಗುರುರಾಜ, ನಿಂಗರಾಜ ಗುಡಗುಂಟಿ, ಸೋಮನಾಥ ಹುಗ್ಗಿ, ಉಮಾರೆಡ್ಡಿ ಹುಂಡೆಕಲ್ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡಿದ್ದರು.
ನವೋದಯ ಪರೀಕ್ಷೆಗೆ 958 ಮಕ್ಕಳು ಹಾಜರು
ಶಹಾಪುರ: ತಾಲೂಕಿನಲ್ಲಿ ನಡೆದ ನವೋದಯ ಸ್ಪರ್ಧಾತ್ಮಕ ಪರೀಕ್ಷೆಗೆ ಒಟ್ಟು 999 ವಿದ್ಯಾರ್ಥಿಗಳಲ್ಲಿ 41 ಗೈರು ಹಾಜರಾಗಿದ್ದು, ಒಟ್ಟು 958 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ರಾಯಪ್ಪರೆಡ್ಡಿ ತಿಳಿಸಿದರು. ಹೋತಪೇಟೆಯ ನವೋದಯ ಶಾಲೆ, ಚರಬಸವೇಶ್ವರ ವಿದ್ಯಾ ಸಂಸ್ಥೆ ಮತ್ತು ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿತ್ತು. 60 ಜನ ಶಿಕ್ಷಕರನ್ನು ಪರೀಕ್ಷೆಗೆ ನಿಯೋಜಿಸಲಾಗಿತ್ತು. ಪರೀಕ್ಷಾ ಆಕ್ರಮ ತಡೆಗಟ್ಟಲು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಶಾಂತಿಯಿಂದ ಪರೀಕ್ಷೆಗಳು ನಡೆದವು.
ಅಣ್ಣಾ ಅಭಿಮಾನಗಳ ಸೈನ್ಯ ಸ್ಥಾಪನೆ 16ಕ್ಕೆ