ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರ ಆಯ್ಕೆ
ಗುರುಮಠಕಲ್: ಇಲ್ಲಿಯ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘದ ವತಿಯಿಂದ 2013-14ನೇ ಸಾಲಿನ ಕಲ್ಯಾಣ ಕನಾಟಕ ಸಾಧಕ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರ ಆಯ್ಕೆಯನ್ನು ಆಯ್ಕೆಯ ಸಮಿತಿಯ ಅಧ್ಯಕ್ಷರಾದ ಕೆ. ಮೊಗುಲಪ್ಪ ಯಾನಾಗುಂದಿಯವರು ಆಯ್ಕೆ ಮಾಡಿದ್ದಾರೆ.
ಶಿಕ್ಷಕರ ಪಟ್ಟಿ ಬಿಡುಗಡೆ: ಬೀದರ್ ಜಿಲ್ಲೆಯಿಂದ ಪ್ರಕಾಶ ಲಕ್ಷೆಟ್ಟಿ, ಲಕ್ಷ್ಮೀಬಾಯಿ ಕಮಠಾಣೆ ಕನ್ಯಾ ಪ್ರೌಢಶಾಲೆ, ಬೀದರ್, ರಾಜಕುಮಾರ ಬೇಳೂರೆ, ಸ.ಪ್ರೌ.ಶಾಲೆ ಚಿಟಗುಪ್ಪ, ತಾ. ಹುಮನಾಬಾದ್ ಪ್ರಿತಮ್ ಸಿಂಗ್ ಜಾದವ, ಸ.ಪ್ರೌ.ಶಾಲೆ ಗದಗಾಂವ. ಗುಲ್ಬರ್ಗ ಜಿಲ್ಲೆಯಿಂದ, ದತ್ತಣ್ಣ ವಿಶ್ವಕರ್ಮ, ಸೇಡಂ. ಅನ್ನಪೂರ್ಣ, ಸ.ಕಿ.ಪ್ರಾ.ಶಾಲೆ.ದರ್ಮಪೂರ ತಾಂಡ ತಾ. ಗುಲ್ಬರ್ಗ, ಮಲ್ಲಿಕಾರ್ಜುನ ಪಾಲಮೂರ, ಉಪನ್ಯಾಸಕರು, ಸ.ಪ.ಪೂ.ಕಾ.ಚಿಂಚೋಳಿ. ವಿಶ್ವನಾಥ ಬಕರೆ, ಸ.ಶಿ. ವಿವೇಕ ವರ್ದಿನಿ ಹಿ.ಪ್ರಾ.ಶಾಲೆ ಆಳಂದ. ಯಾದಗಿರಿ ಜಿಲ್ಲೆಯ ಮಲ್ಲಿಕಾರ್ಜುನ್, ಸ.ಪ್ರೌ.ಶಾಲೆ. ಹೊನಗೇರಾ, ನಿಂಗನಗೌಡ ದೇಸಾಯಿ, ಸ.ಪ್ರೌ.ಶಾಲೆ. ಕೆಂಬಾವಿ, ಸಂಗಯ್ಯ ಸ್ವಾಮಿ, ಜ್ಞಾನೋದಯ ಪಾಠ ಶಾಲೆ, ಗುರುಮಠಕಲ್, ಸುಧಾಕರ ಪೂಜಾರಿ, ಸ.ಪ್ರೌ.ಶಾ.ಗಾಜರಕೋಟ, ಸುಲೋಚನಾ, ಸ.ಹಿ.ಪ್ರಾ.ಶಾಲೆ. ದಂತಾಪುರ. ಹಣಮಂತರವ್.ಜಿ. ಸ.ಉ.ಪ್ರೌ. ಶಾಲೆ. ಗುರುಮಠಕಲ್. ರಾಯಚೂರ ಜಿಲ್ಲೆಯ ವಲಿಬಾಬು, ಸ.ಬಾಲಕರ.ಪ.ಪೂ.ಕಾ ಮಾನ್ವಿ, ಅಂಕಮಹಾದೇವಿ.ಬಿ.ವಿ, ಸ.ಪ್ರೌ.ಶಾಲೆ, ಕಲ್ಮಂಗಿ ಯಲ್ಲಪ್ಪ.ಸ.ಶಿ. ಸ.ಹಿ.ಪ್ರಾ ಬಿ.ಗಣೇಕಲ್. ಕೊಪ್ಪಳ ಜಿಲ್ಲೆಯ ಶ್ರೀನಿವಾಸ ಕಸಬೆ, ಸ.ಕಿ.ಪ್ರಾ.ಶಾಲೆ. ಗುಡ್ಡದ್ ಕ್ಯಾಂಪ್ ಅಂಚೆ ವಡ್ರಟ್ಟಿ, ಬೀರಪ್ಪ ಅಂಡಗಿ, ಸ.ಕೇ.ಪ್ರಾ.ಶಾಲೆ ಕೊಪ್ಪಳ, ಶ್ರೀನಿವಾಸ ದೇಸಾಯಿ, ಸ.ಹಿ.ಪ್ರಾ.ಶಾಲೆ. ಗೆದಗೇರಾ, ಮಲ್ಲಪ್ಪ ಕುದರಿ, ಸ.ಮಾ.ಹಿ.ಪ್ರಾ.ಶಾ.ಚಳಿಗೇರಾ. ಬಳ್ಳಾರಿ ಜಿಲ್ಲೆ ನಿಷ್ಟಿ ರುದ್ರಪ್ಪ, ಕಲ್ಪತರು ವಿದ್ಯಾ ಸಂಸ್ಥೆ ಬಳ್ಳಾರಿ, ಎಸ್.ಎಂ. ಹಿರೆಮಠ, ಸ.ಪ್ರೌ.ಶಾಲೆ ಹಳಲಿಗನೂರ. ಕೌಸಲ್ಯ ದೇವೇಂದ್ರ ನಾಯಕ್, ಸ.ಹಿ.ಪ್ರಾ. ಶಾಲೆ ಹು.ಹಡಗಲಿ. ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷದಂತೆ ಇಬ್ಬರು ನಿವೃತ್ತಿ ಶಿಕ್ಷಕರಾದ ಜೆ.ವ್ಹಿ. ಆಚಾರ್ಯ, ಮಾಣಿಕಪ್ಪ ಪುರುಷೋತ್ತಮ ಅವರನ್ನು ಕಲ್ಯಾಣ ಕರ್ನಾಟಕ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಭೀಮಸೇನ್ ಮತ್ತು ಕಾರ್ಯದರ್ಶಿಗಳಾದ ಶರಣಪ್ಪ ಚಿನ್ನಕಾರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.