ಬಿದ್ದಾಪುರದಲ್ಲಿ ಸುಮಧ್ವವಿಜಯ
ಬಿದ್ದಾಪುರ ಗುರುರಾಯರ ಮಠದಲ್ಲಿ ಪಂಡಿತರಾದ ಮುರಳೀಧರ ಆಚಾರ್ಯ ಬೆಂಗಳೂರು ಇವರಿಂದ ಸುಮಧ್ವ ವಿಜಯ ಉಪನ್ಯಾಸ ನಡೆಯಿತು. ಫೆ.2ರಿಂದಲೇ ಆರಂಭವಾಗಿದ್ದ ಸುಮಧ್ವ ವಿಜಯ ಉಪನ್ಯಾಸ ಮಧ್ವ ನವಮಿಯಂದು ಮಂಗಳವಾಯ್ತು. ಶನಿವಾರ ಮಧು ಅಭಿಷೇಕ, ಪಂಚಾಮೃತ ಅಭಿಷೇಕ ವಿಶೇಷವಾಗಿ ನಡೆದವು. ಮಠದ ವ್ಯವಸ್ಥಾಪಕ ಗುರುರಾಜಾಚಾರ್ಯ, ಮಿಚಾರಣಕರ್ತರಾದ ನವಲಿ ಕೃಷ್ಣಾಚಾರ್ಯರ ಉಸ್ತುವಾರಿಯಲ್ಲಿ ನೂರಾರು ಭಕ್ತರ ಉಪಸ್ಥಿತಿಯಲ್ಲಿ ಸಕಲ ಪೂಜಾದಿ ಕಾರ್ಯಗಳು ಜರುಗಿದವು.