ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಧಿಕಾರಿಗಳ ವರ್ತನೆಗೆ ಕೇಂದ್ರ ಸಚಿವ ಖರ್ಗೆ ಅಸಮಾಧಾನ

Mainashree
Updated On : 10 Feb 2014, 10:46 am

ಗುರುಮಠಕಲ್: ಪಟ್ಟಣದಲ್ಲಿ ಲೋಕೊಪಯೋಗಿ ಬಂದರು ಹಾಗೂ ಒಳನಾಡು ಜಲ ಸಾರಿಗೆ ಇಲಾಖೆ ವತಿಯಿಂದ ಸುಮಾರು ರು. 1ಕೋಟಿ 40 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿದ ನೂತನ ಸಕ್ಯೂಟ್ ಹೌಸ್ ಕಟ್ಟಡದ ಉದ್ಘಾಟನಾ ಫಲಕದಲ್ಲಿ ತಮ್ಮ ಹೆಸರನ್ನು ಪೋರ್ಟ್‌ಕಾಲಿನ ಪ್ರಕಾರ ಹಾಕದೆ, ತಮ್ಮನ್ನು ಅವಮಾನಿಸಲಾಗಿದೆ ಎಂದು ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಅಧಿಕಾರಿಗಳ ವಿರುದ್ಧ ಗರಂ ಆದರು.
ನೂತನವಾಗಿ ನಿರ್ಮಿಸಿದ್ದ ಸರ್ಕ್ಯೂಟ್ ಹೌಸ್‌ನ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಗಮಿಸಿದ  ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಪೋರ್ಟ್‌ಕಾಲ್ ಪ್ರಕಾರ ಮುಖ್ಯ ಮಂತ್ರಿಗಳಾದ ನಂತರದಲ್ಲಿ ಹಾಕಬೇಕಾಗಿತ್ತು ಅದರೆ ಅದನ್ನು ಬಿಟ್ಟು ಕೇಂದ್ರ ಸಚಿವರ ಹೆಸರುಗಳನ್ನು ಬಿಟ್ಟು ಮುಖ್ಯ ಮಂತ್ರಿಗಳ ಹೆಸರಿನ ನಂತರ ಗುರುಮಠಕಲ್ ಶಾಸಕ ಬಾಬುರಾವ್ ಚಿಂಚನಸೂರ ಅವರ ಹೆಸರು ಹಾಕಿದ ನಂತರ ವೀರಪ್ಪ ಮೋಯ್ಲಿ ಹಾಗೂ ಹಾಗೂ ಖರ್ಗೆಯವರ ಹೆಸರನ್ನು ನಾಲ್ಕನೇ ಸಾಲಿನಲ್ಲಿ ಹಾಕಿರುವುದು ಅವರ ಅಸಮಾಧಾನಕ್ಕೆ ಕಾರಣವಾಯಿತು.
ತರಾಟೆ: ಉದ್ಘಾಟನೆಯ ನಾಮಫಲಕವನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡುತ್ತಿದ್ದಂತೆ, ತಮ್ಮ ಹೆಸರನ್ನು ನಾಲ್ಕನೇ ಸಾಲಿನಲ್ಲಿ ಹಾಕಿರುವುದನ್ನು ಗಮನಿಸಿ, ಅಲ್ಲಿಯೇ ಇದ್ದ ಇಲಾಖೆಯ ಹಿರಿಯ ಎಂಜಿನಿಯರ್ ಶಿವಶರಣಪ್ಪ ಗುರಗುಂಟಿ ಅವರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ ನಿಮಗೆ ಪೋರ್ಟ್‌ಕಾಲ್ ಪ್ರಕಾರ ಹೆಸರುಗಳನ್ನು ಹಾಕುವುದು ಗೊತ್ತಿಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು. ಖರ್ಗೆ ಗರಂ ಅಗುತ್ತಿದ್ದಂತೆ 3 ಜಿಲ್ಲೆಗಳ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ ಪಾಟೀಲ್ ಸೇಡಂ, ಖಮರುಲ್ ಇಸ್ಲಾಂ, ಬಾಬೂರಾವ್ ಚಿಂಚನಸೂರ ಹಾಗೂ ಅಲ್ಲಂಪ್ರಭು ಪಾಟೀಲ್ ಸೇರಿದಂತೆ  ಪಕ್ಷದ ಮುಖಂಡರು ತಮ್ಮ ಹೆಜ್ಜೆಯನ್ನು ಹಿಂದಕ್ಕೆ ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement