ಇಂದಿನಿಂದ ಉರೂಸ್
ಆಳಂದ: ಇಲ್ಲಿನ ದರ್ಗಾದ ಸಮನ್ವಯತೆಯ ಹರಿಕಾರ ಈ ಭಾಗದ ಸುಪ್ರಸಿದ್ಧ ಸೂಫಿ- ಸಂತ ಹಜರತ್ ಲಾಡ್ಲೆ ಮಶಾಕ್ರ ವೈಭವದ ಉರುಸ್ ಫೆ.10 ರಿಂದ 12ರ ವರೆಗೆ ನಡೆಯಲಿರುವ ಉರುಸ್‌ಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ, ಗೋವಾ ಮುಂತಾದ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.
ಉರುಸ್ ವಿವರಣೆ: ಈ ಕುರಿತು ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಗಾ ಕಮಿಟಿ ಅಧ್ಯಕ್ಷ ಮಹಮದ್ ಅಫಜಲ್ ಅನ್ಸಾರಿ ಕನೂಸ್, ಉಪಾಧ್ಯಕ್ಷ ಮೋಹಿಜ್ ಅನ್ಸಾರಿ ಕಾರಬಾರಿ ಅದ್ಧೂರಿ ಉರುಸ್ ನಡೆಸಲಾಗುತ್ತದೆ ಎಂದಿದ್ದಾರೆ. 658ನೇ ಉರುಸ್ ಫೆ.10ರಿಂದ ಮೂರು ದಿನವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮ.
ಫೆ.10ರಂದು ಸಂಜೆ ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡು 12ರ ಬೆಳಗಿನ ವರೆಗೆ ಗಂಧದ ಮೆರವಣಿಗೆ ನಡೆಯಲಿದೆ. ಬಳಿಕ ಜಾವ ಚಾದರ್, ಕುತಮುಲ್, ದೀಪೋತ್ಸವ, ಮುಂಬೈನ್ ಕಾಸರ ಸಾಬ್ರಿ ತಂಡದಿಂದ ಪ್ರಸಿದ್ಧ ಖವಾಲಿ, ದಾಸೋಹ ನಡೆಯಲಿದೆ. ಈ ಸಂದರ್ಭದಲ್ಲಿ ಕಮಿಟಿಯ ಸೈಫಲ್ ಮಲಕ್ ಅನ್ಸಾರಿ, ಖಜಾಂಚಿ ಅಹ್ಮೆದ್ ಅನ್ಸಾರಿ, ಕೆ.ಎಂ. ಅನ್ಸಾರಿ, ಫೀರದೋಸ್ ಅನ್ಸಾರಿ ಮೊದಲಾದವರು ಉಪಸ್ಥಿತರಿದ್ದರು.