ಮನೆ ಮನೆಯಲ್ಲಿ ಆಮ್ ಆದ್ಮಿ ಅಭಿಯಾನಕ್ಕೆ ಚಾಲನೆ
ರಾಯಚೂರು: ನಗರದಲ್ಲಿ ಭಾನುವಾರ ಜನಸಂಗ್ರಾಮ ಪರಿಷತ್ ಮತ್ತು ಆಮ್ ಆದ್ಮಿ ಪಾರ್ಟಿಯಿಂದ ಹೈ.ಕ. ಪ್ರದೇಶದಲ್ಲಿ ಮೊದಲ ಬಾರಿಗೆ ಮನೆ ಮನೆಗೂ ಆಮ್ ಆದ್ಮಿ, ಮನೆ ಮನೆಯಲ್ಲಿ ಆಮ್ ಆದ್ಮಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಜನಸಂಗ್ರಾಮ ಪರಿಷತ್ ರಾಜ್ಯ ಸಂಚಾಲಕ ಎಸ್.ಆರ್. ಹಿರೇಮಠ ಅವರು ನಗರದ ಅಂದ್ರೂನ್ ಕಿಲ್ಲಾ ಪ್ರದೇಶದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಹಾಗೂ ಜನಸಂಗ್ರಾಮ ಪರಿಷತ್ನ ಕಾರ್ಯಕರ್ತರು ಡಿಡಿಪಿಐ ಕಚೇರಿ ಬಳಿಯ ಅಂದ್ರೂನ್ ಕಿಲ್ಲಾ ಪ್ರದೇಶದಲ್ಲಿ ಮನೆ ಮನೆಗಳಿಗೆ ತೆರಳಿ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಜನತೆಗೆ ಪಕ್ಷ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟದ ಬಗ್ಗೆ ಮಾಹಿತಿ ನೀಡಿ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಅಭಿಯಾನದಲ್ಲಿ ಜನಸಂಗ್ರಾಮ ಪರಿಷತ್ನ ಸಂಚಾಲಕ ರಾಘವೇಂದ್ರ ಕುಷ್ಟಗಿ, ಆಮ್ ಆದ್ಮಿ ಪಾರ್ಟಿಯ ಪ್ರಮುಖರಾದ ಕವಿಕೃಷ್ಣರೆಡ್ಡಿ, ಶಿವಕುಮಾರ್, ವಿಶಾಲ್ ಪ್ರತಾಪ್, ವೈಜನಾಥ ಹಿರೇಮಠ, ವಿಜಯಕುಮಾರ್ ಸೇರಿದಂತೆ ಅನೇಕರಿದ್ದರು.