ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

14ಕ್ಕೆ ರೇವಣಸಿದ್ದೇಶ್ವರ ರಥೋತ್ಸವ

Rashmi Kasaragodu
Updated On : 11 Feb 2014, 1:55 am

ಗುಲ್ಬರ್ಗ: ತಾಲೂಕಿನ ಮಕ್ತಂಪುರ ರೇವಣಸಿದ್ದೇಶ್ವರ ಗದ್ದುಗೆಮಠದ ರಥೋತ್ಸವ ಫೆ.14 ರಂದು ಸಂಜೆ 7.10ಕ್ಕೆ ನಡೆಯಲಿದೆ ಎಂದು ರೇವಣಸಿದ್ದೇಶ್ವರ ಜಾತ್ರಾ ಸಮಿತಿ ತಿಳಿಸಿದೆ.
ಫೆ.13 ರಂದು ಸಂಜೆ 8ಕ್ಕೆ ಧೋತ್ರಗಾಂವ್ ಶಿವಕುಮಾರ ಶಾಸ್ತ್ರಿ ಮತ್ತು ಸುಂಟನೂರ ನಾಗಲಿಂಗಯ್ಯ ಸ್ವಾಮಿ ಯುವರು ಗರಗದ ಮಡಿವಾಳೇಶ್ವರ ಪುರಾಣ ಮಂಗಲ ನಡೆಸುವರು. ಫೆ.14ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಬೆಳಗ್ಗೆ 9ಕ್ಕೆ ಪೂಜ್ಯರಿಂದ ಷಟಸ್ಥಲ ಧ್ವಜಾರೋಹಣ, ಬೆಳಗ್ಗೆ 10ಕ್ಕೆ ವಿಜಯಕುಮಾರ ಭೀಮಣ್ಣ ಮತ್ತು ಬಸವರಾಜ ಭೀಮಳ್ಳಿಯವರ ಮನೆಯಿಂದ ಕಳಸ, ಉತ್ಸವ ಮೂರ್ತಿ ಆಗಮನ. ಮಧ್ಯಾಹ್ನ 2ಕ್ಕೆ ಬಾಲಕ, ಬಾಲಕಿಯರ ವಚನ, ಗಾಯನ ಆಟಗಳ ಸ್ಪರ್ಧೆ, ಸಂಜೆ 5.30ಕ್ಕೆ ರೇಣುಕಾನಂದ ಚೌದ್ರಿ ಮನೆಯಿಂದ ಕುಂಭ ಬರುವುದು, 6ಕ್ಕೆ ಮಲ್ಲೇಶಪ್ಪ ಮತ್ತು ನಾಗಭೂಷಣ ಅಗಸ್ಥ್ಯತೀರ್ಥ, 6.30ಕ್ಕೆ ಸಿದ್ದರಾಮಪ್ಪ ಚಿಂಚಪೂರ ಮನೆಯಿಂದ ವಸ್ತ್ರ ಆಗಮನ ಸಂಜೆ 7.10ಕ್ಕೆ ಮಹಾ ರಥೋತ್ಸವ ಸಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement