ಅಕ್ರಮ ಮರಳು; ಬಂಧನ
ಗುಲ್ಬರ್ಗ: ತಾಲೂಕಿನ ಸೋಮನಾಥ ಹಳ್ಳಿ ಗ್ರಾಮದ ಭೀಮಾ ನದಿಯಲ್ಲಿ ಆಕ್ರಮವಾಗಿ ಹಿಟಾಚಿ ಬಳಸಿ ಮರಳು ತೆಗೆದು ಟ್ರ್ಯಾಕ್ಟರ್ಗಳಿಂದ ಸಾಗಿಸಲಾಗುತ್ತಿರುವ ಬಗ್ಗೆ ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಫರತಾಬಾದ್ ಪೊಲೀಸರು ದಾಳಿ ನಡೆಸಿದ್ದು, ಮರಳು ಅಗೆಯಲು ಬಳಸಿದ್ದ ಯಂತ್ರಗಳು ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭೀಮಾ ನದಿಯಿಂದ ಮರಳನ್ನು ಕಳವಿನ ಮಾರ್ಗದಲ್ಲಿ ಟ್ರ್ಯಾಕ್ಟರ್ಗೆ ತುಂಬಿಸಿಕೊಂಡು ಸೋಮನಾಥ ಹಳ್ಳಿಯ ಕಡೆಗೆ ಕಳ್ಳರು ಹೊರಟಿದ್ದರು. ಆಗ ಕಚ್ಚಾ ರಸ್ತೆ ಮೂಲಕ ಪೊಲೀಸರು ಹೋಗಿ ಸೋಮನಾಥ ಹಳ್ಳಿ ಗ್ರಾಮದ ಹತ್ತಿರ ಹಿಡಿಯಲಾಗಿದೆ. ಭೀಮಾ ನದಿಯ ದಂಡೆಯಲ್ಲಿ ಟ್ರ್ಯಾಕ್ಟರ್ಗಳು ನಿಲ್ಲಿಸಿದ್ದು, ಭೀಮಾ ನದಿ ದಂಡೆಯಲ್ಲಿನ ಮರಳನ್ನು ಕಳ್ಳತನದಿಂದ ಹಿಟಾಚಿಯ ಸಹಾಯದಿಂದ ಅಗೆದು ತುಂಬುವುದನ್ನು ದೂರದಿಂದ ಜಾಲಿ ಗಿಡದ ಪೊದೆಗಳ ಮರೆಯಲ್ಲಿ ನಿಂತು ನೋಡಿ ದಾಳಿ ಮಾಡಲಾಗಿದೆ. ಪೊಲೀಸರು ಸುತ್ತುವರೆದರು ಎಂಬ ಸುದ್ದಿ ಅರಿತು ಸ್ಥಳದಿಂದ ಹಲವರು ಓಡಿ ಹೋಗಿದ್ದಾರೆ.
ಜೇವರ್ಗಿ ತಾಲೂಕಿನ ನರಿಬೋಳಿಯವರಾದ ಮಾರುತಿ ತಂದೆ ಸುಭಾಶ್ಚಂದ್ರ ನಾಯ್ಕೋಡಿ, ಗಣೇಶ ತಂದೆ ಸುಭಾಶ್ಚಂದ್ರ ನಾಯ್ಕೋಡಿ ಹಾಗೂ ಐನೋಳ್ಳಿಯ ಪ್ರದೀಪ ತಂದೆ ಶಿವರಾಯ ದೊಡ್ಮನಿ ಇವರನ್ನು ಪೊಲೀಸರು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಹಣಮಂತ ತಂದೆ ಬಾಬುರಾಯ ಡೊಂಬರಿ ಸೋಮನಾಥ ಹಳ್ಳಿ ಓಡಿ ಹೋಗಿದ್ದಾನೆ. ಸ್ಥಳದಲ್ಲಿದ್ದ 1 ಟ್ರ್ಯಾಕ್ಟರ್ ಮರಳು ತುಂಬಿದ ಮತ್ತೊಂದು ಟ್ರ್ಯಾಕ್ಟರ್, ಹಿತಾಚಿ ಸೇರಿದಂತೆ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.