ಈಡೇರದ ಬೇಡಿಕೆ: ಪ್ರತಿಭಟನೆ
ಗುಲ್ಬರ್ಗ: ಅನ್ಯಭಾಗ್ಯ ಹಮಾಲರಿಗೆ ಸರ್ಕಾರ ನೀಡಿದ ಆಶ್ವಾಸನೆ ಈಡೇರಿಸದಿರುವುದನ್ನು ಕರ್ನಾಟಕ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟ ಖಂಡಿಸಿ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಿದೆ. ಅನ್ಯಭಾಗ್ಯ ಹಮಾಲರ ಕೂಲಿದರ ಗೋದಾಮಿನ ಲಾಟ್ನಿಂದ ಸ್ಕೇಲ್ಗೆ, ಸ್ಕೇಲ್ನಿಂದ ಲಾರಿಗೆ ಮತ್ತು ಲಾರಿಯಿಂದ ಪಡಿತರ ವಿತರಕರ ಅಂಗಡಿಗಳಿಗೆ ಹೋಗಿ ಅಲ್ಲಿ ಮತ್ತೆ ಅನ್ಲೋಡ್ ಮಾಡುವ ಕೆಲಸಕ್ಕೆ ಕ್ವಿಂಟಾಲ್ಗೆ 18 ನಿಗದಿ ಮಾಡಬೇಕು. ಎಲ್ಲಾ ಹಮಾಲರಿಗೆ ಇಎಸ್ಐ, ಪಿಎಫ್ ಹಾಗೂ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕೆಂದು ರಾಜ್ಯ ಲೋಡಿಂಗ್ ಮತ್ತು ಅನ್ಲೋಡಂಗ್ ಕಾರ್ಮಿಕರ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದೆ.