ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯಾರ್ಥಿ ಜೀವನ ವಜ್ರಕ್ಕಿಂತಲೂ ಶ್ರೇಷ್ಠ

Rashmi Kasaragodu
Updated On : 11 Feb 2014, 1:57 am

ಹುಣಸಗಿ: ವಿದ್ಯಾರ್ಥಿಜೀವನ ಎಂಬುದು ವಜ್ರಕ್ಕಿಂತ ಶ್ರೇಷ್ಠವಾದ ಹೊಳಪನ್ನು ಹೊಂದಿರುವುದಲ್ಲದೇ ವಜ್ರಕ್ಕಿಂತ ಬೆಲೆ ಬಾಳುವಂತಹದ್ದಾಗಿದೆ ಎಂದು ಹಿರಿಯ ಪತ್ರಕರ್ತ ಮತ್ತು ಡಿವಿಜಿ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಕಾಮನಟಗಿ ಅಭಿಪ್ರಾಯ ಪಟ್ಟರು.
ಪಟ್ಟಣದ ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದ ಅನರು, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಿ, ಉತ್ತಮ ಅಂಕಗಳನ್ನು ಗಳಿಸಿ ಪಾಲಕರ ಮತ್ತು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಬೇಕೆಂದು ಹೇಳಿದರು.
 ಹುಣಸಗಿ ಪಿಎಸ್‌ಐ ಮಂಜುನಾಥ ಸಿರಿವೇರಿ ಮಾತನಾಡಿ, ಓದಿನ ಜತೆಗೆ ಕ್ರೀಡೆಗೂ ವಿದ್ಯಾರ್ಥಿಗಳು ಮಹತ್ವ ನೀಡುವಂತೆ ತಿಳಿಸಿದರು. ಲಕ್ಷ್ಮಿ ವೆಂಕಟೇಶ್ವರ ಶೈಕ್ಷಣಿಕ ಅಭಿನೃದ್ಧಿ ಸಂಸ್ಥೆ ಅಧ್ಯಕ್ಷ ಮಾಧವರಾವ್ ಕುಲಕಣರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕ ಯಲ್ಲಪ್ಪ ಚಂದನಕೇರಿ, ಮಶಾಕ ಯಾಳಗಿ, ಗುರುರಾಜ ಜೋಷಿ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement