ಶಿಕ್ಷಣ ಪ್ರತಿಯೊಬ್ಬರ ಸಂವಿಧಾನ ಹಕ್ಕು
ಕೆಂಭಾವಿ: ಶಿಕ್ಷಣ ದೇಶದ ಪ್ರತಿಯೊಬ್ಬರ ಸಂವಿಧಾನ ಬದ್ಧ ಹಕ್ಕು, ಶಿಕ್ಷಣಕ್ಕಾಗಿಯೇ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಮುಂದೆ ಬರಬೇಕೆಂದು ಕರೆ ನೀಡಿದರು.
ಪಟ್ಟಣದ ನವೋದಯ ಶಿಕ್ಷಣ ಸಂಸ್ಥೆಯ ವಿದ್ಯಾಲಕ್ಷ್ಮೀ ಪಬ್ಲಿಕ್‌ಶಾಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಹೆಚ್ಚು ಅಂಕಗಳಿಸಿ ವಿದ್ಯೆಯಲ್ಲಿ ಮುಂದೆ ಬರಬೇಕೆಂಬ ಪಾಲಕರ ಅಭಿಪ್ರಾಯ ತಪ್ಪು, ವಿದ್ಯೆಯ ಜೊತೆಗೆ ಸಮಾಜದಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ತಿಳಿಸುವ ಕರ್ತವ್ಯ ಶಿಕ್ಷಕ ಮತ್ತು ಪಾಲಕರ ಮೇಲಿದೆ ಎಂದರು.
ತಾಲೂಕ ಚುಸಾಪ ಅಧ್ಯಕ್ಷ ಶಿವಶರಣಪ್ಪ ಶಿರೂರ, ಮಕ್ಕಳು ಪ್ರಕೃತಿ ನೀಡಿದ ಕಲ್ಲಿನಂತೆ. ಅವರನ್ನು ಒಂದು ರೂಪಕ್ಕೆ ತಂದು ವಿದ್ಯೆ ಎಂಬ ಕೆತ್ತನೆಯನ್ನು ಮಾಡಿ ದೇಶದಲ್ಲಿ ಒಳ್ಳೆ ಪ್ರಜೆಗಳನ್ನು ಮಾಡುವ ಜವಾಬ್ದಾರಿ ಎಲ್ಲ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಕಬೀರ ಶ್ರೀ ಸಾನಿಧ್ಯ ವಹಿಸಿದ್ದರು, ನವೋದಯ ಶಿಕ್ಷಣ ಸಂಸ್ಥೆಯ ಎಸ್. ಸೂರ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ಸಿದ್ಧನಗೌಡ ಪೊಲೀಸ್ ಪಾಟೀಲ, ತಾಪಂ ಸದಸ್ಯ ಖಾಜಾಪಟೇಲ ಕಾಚೂರ, ಅನ್ನಪೂರ್ಣ ಮಾಲಿಪಾಟೀಲ, ಗ್ರಾಪಂ ಅಧ್ಯಕ್ಷೆ ಪದ್ಮಾವತಿ ದೇವರಮನಿ, ಬಿಸಿಯೂಟ ಅಧಿಕಾರಿ ಚಂದ್ರಕಾಂತ ಕೊಣ್ಣೂರ, ಶರಣಬಸ್ಸು ಡಿಗ್ಗಾವಿ, ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ, ಮೋಹನರೆಡ್ಡಿ ಡಿಗ್ಗಾವಿ, ಆರ್. ವೆಂಕಟರಾವ್, ಡಿ. ರಂಗನಾಥ, ಸಿಆರ್ಸಿ ಶ್ರೀಶೈಲ ಪಾಸೋಡಿ, ಮಲ್ಲಣ್ಣ ಸುರಪುರ, ಶಿವಪುತ್ರ ಅಲ್ದಾಳ, ಬಸವರಾಜ ಮಲ್ಲೆ, ಸಿದ್ದನಗೌಡ ಹೊಸಮನಿ, ನಿಂಗಣ್ಣ ಹುಜರತಿ, ನಿಂಗಾರೆಡ್ಡಿ ಚೌಧರಿ ಭಾಗವಹಿಸಿದ್ದರು. ಶಾಲಾ ಮುಖ್ಯಗುರು ಎಸ್. ನಾಗಮಣಿ ವರದಿ ವಚನ ಮಾಡಿದರು, ಕಾರ್ಯದರ್ಶಿ ಎಸ್. ರಾಮು ಸ್ವಾಗತಿಸಿದರು, ಬಂದಗಿ ಪಟೇಲ ನಿರೂಪಿಸಿದರು, ಸಾವಿತ್ರಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.