ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

15ರಂದು ಸಂತ ಸೇವಾಲಾಲ್ ಜಯಂತಿ ಆಚರಣೆಗೆ ನಿರ್ಧಾರ

Rashmi Kasaragodu
Updated On : 12 Feb 2014, 3:16 am

ಶಹಾಬಾದ್: ಪ್ರತಿ ವರ್ಷದಂತೆ ವಾಡಿ ಬಂಜಾರ ಸೇವಾ ಸಂಘದ ವತಿಯಿಂದ ಸಂತ ಸೇವಾಲಾಲರ 275 ನೇ ಜಯಂತ್ಯುತ್ಸವವನ್ನು ಫೆ.15 ರಂದು ಆಚರಿಸಲು ನಿರ್ಧರಿಸಿ, ಸೇವಾಲಾಲರ ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಬಂಜಾರ ಸೇವಾ ಸಂಘದ ಅಧ್ಯಕ್ಷ ರವಿ ಆರ್.ಚವ್ಹಾಣ ಒತ್ತಾಯಿಸಿದರು.
ವಾಡಿ ಪಟ್ಟಣದಲ್ಲಿ ಸೇವಾ ಸಂಘದಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಡಿ ವಲಯದ 84 ತಾಂಡಾಗಳ ವತಿಯಿಂದ ಪ್ರತಿ ವರ್ಷದಂತೆ ಸೇವಾಲಾಲರ ಜಯಂತಿ ಆಚರಿಸಲಾಗುತ್ತಿದ್ದು, ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆಯವರು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ವಾಲ್ಮೀಕಿ ನಾಯಕ ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ ಎಂದರು.
ಬೆ. ಅಬ್ಬೆತುಮಕೂರಿನ ಗಂಗಾಧರ ಶ್ರೀ, ಜೇಮಸಿಂಗ್ ಮಹಾರಾಜರು ಮಂಗಳಾರತಿ, ಅಗ್ನಿಗೆ ಭೋಗ ಅರ್ಪಿಸುವರು. ಮ.2ಕ್ಕೆ ನಡೆಯುವ ಸರ್ವ ಧರ್ಮ ಸಮ್ಮೇಳನದಲ್ಲಿ ನಾಲವಾರದ ಕೋರಿಸಿದ್ದೇಶ್ವರ ಮಠದ ಡಾ. ಸಿದ್ದ ತೋಟೆಂದ್ರ ಸ್ವಾಮಿ, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯ, ರಾವೂರನ ಸಿದ್ದಲಿಂಗ ಸ್ವಾಮಿ, ಮುಗುಳನಾಗಾವದ ಅಭಿನವ ಸಿದ್ದಲಿಂಗ ಶಿವಾಚಾರ್ಯ, ಹಲಕರ್ಟಿಯ ಅಭಿನವ ಮುನೀಂದ್ರ ಶಿವಾಚಾರ್ಯರು, ವಿಠಲ ಮಹಾರಾಜ, ಬಳಿರಾಮ ಮಹಾರಾಜ, ಹಲಕರ್ಟಿಯ ಬಂದಾನವಾಜ ಆಸ್ತಾನೆ ಖಾದರಿ ತುರಾಬಿ ಶಹಾ, ಆಶೀರ್ವಚನ ನೀಡಲಿದ್ದಾರೆ.
ಆಗ್ರಹ: ಸರ್ಕಾರ ಸೇವಾಲಾಲರ ಜಯಂತಿಯನ್ನು ಸರ್ಕಾರದಿಂದ ಆಚರಿಸುವುದಲ್ಲದೆ, ಫೆ.15 ರಂದು ಸರ್ಕಾರಿ ರಜೆ ಘೋಷಿಸಬೇಕೆಂದು ಆಗ್ರಹಿಸಿ ಜಯಂತ್ಯುತ್ಸವದ ದಿನ ಕೇಂದ್ರ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ, ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಬಂಜಾರ ಅಭಿವೃದ್ಧಿ ನಿಗಮ ಸೇರಿದಂತೆ ಇತರೆ ಒಂದು ನಿಗಮದ ಅಧ್ಯಕ್ಷ ಸ್ಥಾನಕ್ಕೆ ಬಂಜಾರ ಸಮಾಜ ವ್ಯಕ್ತಿಗೆ ಅವಕಾಶ ನೀಡಬೇಕು. ಗುಲ್ಬರ್ಗ ಬಳಿಯ ಶ್ರೀನಿವಾಸ ಸರಡಗಿ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಸ್ಥಳದಲ್ಲಿ ಬಂಜಾರ ಸಮಾಜದವರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದು, ಸರ್ಕಾರ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾರ ಹೆಸರನ್ನು ಇಡಬೇಕೆಂದು ಆಗ್ರಹಿಸಿದರು. ಸಮಾಜದ ಮುಖಂಡರು ಡಾ. ಆರ್.ವಿ. ಪವಾರ, ಸೋಮ್ಲಾ ಕಾರಬಾರಿ, ರಮೇಶ ಕಾರಬಾರಿ, ನೀಲಸಿಂಗ್, ಈಶ್ವರ ರಾಠೋಡ, ಟೋಪಸಿಂಗ್, ಭೋಜು ರಾಠೋಡ, ವಿಜಯ ನಾಯಕ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement