ನರೇಶ ಕುಟುಂಬಕ್ಕೆ 50 ಸಾವಿರ ಪರಿಹಾರ
ಚಿಂಚೋಳಿ: ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಭಾನುವಾರ ಜರುಗಿದ ಕೋಲಿ- ಕಬ್ಬಲಿಗ ಗಂಗಾಮತ ಸಮಾಜದ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ಮಾತಾ ಮಾಣಿಕೇಶ್ವರಿ ಬೆಟ್ಟವನ್ನು ಹತ್ತುವ ಸಂದರ್ಭದಲ್ಲಿ ತೀವ್ರ ಅಸ್ವಸ್ಥನಾಗಿ ಮೃತಪಟ್ಟ ನರೇಶ ಯಂಕಪ್ಪನ ಕುಟುಂಬಕ್ಕೆ ಸಚಿವ ಬಾಬುರಾವ ಚಿಂಚನಸೂರ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಮೃತನ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೃತನ ಕುಟುಂಬಕ್ಕೆ ಕಂದಾಯ ಇಲಾಖೆಯಿಂದ 2 ಎಕರೆ ಜಮೀನು ನೀಡಲಾಗುವುದು. ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅಂತಾವರಂ ಗ್ರಾಮದಲ್ಲಿ 2ಎಕರೆ ಸರ್ಕಾರಿ ಜಮೀನು ನೀಡಲಾಗುವುದು ಮತ್ತು ವಾಸಕ್ಕಾಗಿ ಸರ್ಕಾರದಿಂದ ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಸಚಿವ ಬಾಬುರಾವ ಚಿಂಚನಸೂರ ಹೇಳಿದರು. ಶಾಸಕ ಡಾ. ಉಮೇಶ ಜಾಧವ್, ಶಿರಸ್ತೆದಾರ ವೆಂಕಟೇಶ ದುಗ್ಗನ್, ಕಂದಾಯ ನಿರೀಕ್ಷಕ ಕೇಶವ್ ಕುಲಕರ ಿ ನರಸಿಂಹಲೂ ಕುಂಬಾರ, ನರಸಿಂಹಲೂ ಸವಾರಿ ಸೇರಿದಂತೆ ಇತರರಿದ್ದರು.