ಪದ್ಮಣ ಗೌಡ ತೊನಸಳ್ಳಿ ಬುಟ್ನಾಳ ನಿಧನ
ಜೇವರ್ಗಿ: ತಾಲೂಕಿನ ಬಿಜೆಪಿ ಮುಖಂಡ ಹಾಗೂ ಬುಟ್ನಾಳ ಗ್ರಾಮದ ನಿವಾಸಿ ಪದ್ಮಣ ಗೌಡ ಶಿವಲಿಂಗಪ್ಪಗೌಡ ತೊನಸಳ್ಳಿ (55) ಸೋಮವಾರ ನಿಧನರಾದರು. ಮೃತರು ತಂದೆ, ಪತ್ನಿ, ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಪದ್ಮಣ ಗೌಡ ಬುಟ್ನಾಳ ಅವರು ಕೋಳಕೂರ ಮಂಡಲ ಪಂಚಾಯ್ತಿ ಸದಸ್ಯರಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲೂಕು ಭೂ ಮಂಜೂರಾತಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಪದ್ಮಣ ಗೌಡ ಬುಟ್ನಾಳ ನಿಧನಕ್ಕೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ದಂಡಪ್ಪ ಸಾಹು ಕುರಳಗೇರಾ, ರಮೇಶಬಾಬು ವಕೀಲ್, ಎಂ.ಬಿ. ಪಾಟೀಲ್, ಬಸವರಾಜ ಮಾಲಿಪಾಟೀಲ್, ಬಸವರಾಜ ಕಂದಗಲ್ ಶೋಕ ವ್ಯಕ್ತಪಡಿಸಿದ್ದಾರೆ.