ಮಾ.31ರೊಳಗೆ ಕಾಮಗಾರಿ ಪೂರ ಗೊಳಿಸಿ: ಪ್ರಿಯಾಂಕ್
ಚಿತ್ತಾಪುರ: ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಎಲ್ಲಾ ಇಲಾಖೆಗಳಲ್ಲಿನ ಕಾಮಗಾರಿಗಳನ್ನು ಮಾ. 31 ರೊಳಗೆ ಪೂರ ಗೊಳಿಸಿ ಏಪ್ರಿಲ್ ಮೊದಲ ವಾರದೊಳಗೆ ವರದಿ ಸಲ್ಲಿಸಬೇಕೆಂದು ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಗಡುವು ನೀಡಿದರು.
ತಾಪಂ ಸಭಾಂಗಣದಲ್ಲಿ ಜರುಗಿದ ಪ್ರಗತಿ ಸಭೆಯಲ್ಲಿ ಮಾತನಾಡಿ, ಸರ್ಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಎಲ್ಲರೂ ಕೂಡಿ ಕೆಲಸ ಮಾಡಿದಲ್ಲಿ ಸಾಧ್ಯ. ಒಬ್ಬರಿಂದ ಸಾಧ್ಯವಿಲ್ಲ. ಬಂದ ಅನುದಾನ ವರ್ಷಗಳ ಗಟ್ಟಲೇ ಉಪಯೋಗಿಸದೇ ಇದ್ದರೇ ಅಭಿವೃದ್ಧಿಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕೆಡಿಪಿ ಕಾಟಾಚಾರವಾಗುವದು ಬೇಡ: ಕೆಡಿಪಿ ಸಭೆಗೆ ಬರುವಾಗ ತಮ್ಮ ಇಲಾಖೆಯ ಅಪೂರ ಮಾಹಿತಿಯೊಂದಿಗೆ ಬರುವುದು ಬೇಡ. ಮುಂದಿನ ಸಭೆಗೆ ಬರುವಾಗ ಸಂಪೂರ ಮಾಹಿತಿಯೊಂದಿಗೆ ಬರಲು ಕಳೆದ ಸಭೆಯಲ್ಲಿ ತಿಳಿಸಿದ್ದರು ಕೂಡ ತಾವುಗಳು ಅಪೂರ ಮಾಹಿತಿಯೊಂದಿಗೆ ಬಂದಿರುವುದು ತಮ್ಮ ಬೇಜವಬ್ದಾರಿ ಎತ್ತಿ ತೋರಿಸುತ್ತಿದೆ. ಹಾಜರಾತಿ ಸಹಿ ಮಾಡಿಸಿಕೊಂಡು ಕಳುಹಿಸಿ ಕೊಡಿ, ಆದರೆ ಅಪೂರ ಮಾಹಿತಿಯೊಂದಿಗೆ ಬಂದರೆ ಸಭೆ ಮಾಡುವುದಾದರೂ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿಗೆ ನೂತನವಾಗಿ ವರ್ಗವಾಗಿ ಬಂದಿರುವ ವಿವಿಧ ಇಲಾಖೆಯ ಅಧಿಕಾರಿಗಳು ಸೌಜನ್ಯಕ್ಕಾದರೂ ತಮಗೆ ಭೇಟಿಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ನೀಡಿಲ್ಲ: ಕೃಷಿ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ಹಾಗೂ ಅವುಗಳ ಸದುಪಯೋಗಪಡಿಸಿಕೊಂಡ ಕುರಿತು ಸರಿಯಾದ ಮಾಹಿತಿ ಇಲ್ಲ ಕಳೆದ ಸಭೆಯಲ್ಲಿ ರೈತಸಂಪರ್ಕ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಸ್ಥಳದ ಬಗ್ಗೆ ಮಾಹಿತಿ ಕೇಳಿದರೆ ಇದುವರೆಗೂ ಮಾಹಿತಿ ನೀಡಿಲ್ಲ. ಬೆಳೆ ಹಾನಿಯು ಬೇರೆ ತಾಲೂಕಿನಲ್ಲಿ ಸಲ್ಲಿಸಿದ ವರದಿಯಂತೆ ಶೇ.90ರಷ್ಟು ಪರಿಹಾರ ಸಿಗುತ್ತದೆ. ಆದರೆ ನಮ್ಮ ತಾಲೂಕಿಗೆ ಆ ಸೌಲಭ್ಯ ಏಕೆ ಸಿಗುತ್ತಿಲ್ಲ ಎಂದು ಎಡಿಎ ಕನಕ ರವರಿಗೆ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಇರುವ ಶಾಲೆಗಳಲ್ಲಿ ಮಾ.31 ರೊಳಗೆ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲು ಬಿಇಒ ಬನ್ನಿಕಟ್ಟಿ ಅವರಿಗೆ ಸೂಚಿಸಿದರು.
ತಾಪಂ ಅಧ್ಯಕ್ಷ ಶರಣಗೌಡ ಭಾಗೋಡಿ, ಉಪಾಧ್ಯಕ್ಷೆ ಶಾಂತಾಬಾಯಿ, ತಾಪಂ ಇಒ ಬಸರಾಜ ಜಿರಡೆ, ಅಧಿಕಾರಿಗಳಾದ ಅರ್.ರತ್ನಾಕರ, ನಂದಕುಮಾರ ಕುಲಕರ ಿ ಇದ್ದರು.