ವಾರ್ಷಿಕೋತ್ಸವ
ಗುಲ್ಬರ್ಗ: ಕೋರಿಸಿದ್ದೇಶ್ವರ ಎಜುಕೇಷನಲ್ ಚಾರಿಟೇಬಲ್ ಅಂಡ್ ವೆಲಫೇರ್ ಟ್ರಸ್ಟ್ನ ಕೋರಿಸಿದ್ದೇಶ್ವರ ಕನ್ನಡ ಹಾಗೂ ಇಂಗ್ಲೀಷ್ ಕಾನ್ವೆಂಟ್ ಶಾಲೆಯ ವಾರ್ಷಿಕೋತ್ಸವ ಫೆ.12 ರಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ. ಡಾ. ಸಿದ್ದತೋಟೆಂದ್ರ ಶ್ರೀ ಸಾನಿದ್ಯ ವಹಿಸುವರು. ಮಲ್ಲಿಕಾರ್ಜುನ ಸ್ವಾಮಿ ಟೆಂಗಳಿ, ನೇತೃತ್ವ ವಹಿಸುವರು. ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಕಾರ್ಯಕ್ರಮ ಉದ್ಘಾಟಿಸುವರು. ಪ್ರೊ. ಚಂದ್ರಕಾಂತ ಎಂ.ಯಾತನೂರ, ಉಮಾಕಾಂತ ನಿಗ್ಗುಡಗಿ, ರಾತ ರಾಜ ಸಾವಳಗಿ, ಶಿವರಾಜ ದಿಗ್ಗಾಂವಿ, ಹರಿಬಾ ಎ. ಜಮಾದಾರ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡಾಕ್ಟರೇಟ್ ಪದವಿ
ಗುಲ್ಬರ್ಗ: ಜೇವರ್ಗಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಸಹಾಯ ಪ್ರಾದ್ಯಾಪ ವಿಷ ುವರ್ಧನ ಅರ್ಜುನ ಮೂಲಿಮನಿ ಅವರು ಮಂಡಿಸಿದ ದ ರೋಲ್ ಆಫ್ ಡಿ.ಎಸ್.ಎಸ್ ಇನ್ ದ ಇಮ್ಯಾನ್ಸಿಪೇಷನ್ ಆಫ್ ದಲಿತ್ ಇನ್ ಕರ್ನಾಟಕ (1975-2008) ಮಹಾ ಪ್ರಬಂಧಕ್ಕೆ ಗುಲ್ಬರ್ಗ ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಗುವಿವಿ ಕುಲಸಚಿವ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಎಂ. ಯಾತನೂರ ಮಾರ್ಗದರ್ಶಕರಾಗಿದ್ದರು. ಫೆ.20ರಂದು ನಡೆಯುವ 32ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.