ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಖಾ ಕಾಲುವೆಗೂ ನವೀಕರಣ ಯೋಗ

Rashmi Kasaragodu
Updated On : 12 Feb 2014, 3:15 am

ಹುಣಸಗಿ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ನವೀಕರಣಕ್ಕಾಗಿ ಸರ್ಕಾರ ಈಗಾಗಲೇ  ಮಂಜೂರು ಮಾಡಿರುವ 511 ಕೋಟಿ ಕಾಮಗಾರಿಯ ಪ್ರಮುಖ ಪ್ರಕ್ರಿಯೆಗಳು ಭರದಿಂದ ನಡೆಯುತ್ತಿದ್ದು, ಇದರಲ್ಲಿ 11.5 ಕಿ.ಮೀ ಉದ್ದದ ಹುಣಸಗಿ ಶಾಖಾ ಕಾಲುವೆಯನ್ನೂ ಸೇರಿಸಲಾಗಿದೆ. ಇದರಿಂದ ಕಾಲುವೆ ಕೊನೆಯ ಭಾಗದ ರೈತರಲ್ಲಿ ಆಶಾಕಿರಣ ಮೂಡಿದಂತಾಗಿದೆ.
ಕೃಷ    ಾ ಭಾಗ್ಯ ಜಲ ನಿಗಮದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯು 78 ಕಿ.ಮೀ. ಉದ್ದವಿದ್ದು, ಇದರಲ್ಲಿ ಶಾಖಾ ಕಾಲುವೆ ಸೇರಿದಂತೆ 18 ವಿತರಣಾ ಕಾಲುವೆಗಳಿವೆ. ಈ ಕಾಲುವೆಗಳ ಮುಖಾಂತರ 1.50 ಲಕ್ಷ ಎಕರೆಗಳಷ್ಟು ಜಮೀನಿಗೆ ನೀರು ಒದಗಿಸಲಾಗುತ್ತಿದೆ ಎಂದು ನಿಗಮದ ದಾಖಲೆಗಳು ಹೇಳುತ್ತವೆ.
ವಾಸ್ತವದಲ್ಲಿ ಕಳೆದ ಎರಡು ದಶಕಗಳಿಂದ 1 ಲಕ್ಷ ಎಕರೆ ಭೂಮಿಗೆ ಮಾತ್ರ, ಅದೂ ಕಾಲುವೆಯ ಆರಂಭದ ಅರ್ಧದಷ್ಟು ಜಮೀನುಗಳಿಗೆ ಮಾತ್ರ ನೀರು ಲಭ್ಯವಾಗುತ್ತಿದೆ. ಇನ್ನುಳಿದ 50 ಸಾವಿರ ಎಕರೆ ಜಮೀನಿಗೆ ಕೇವಲ ದಾಖಲೆಗಳಲ್ಲಷ್ಟೆ ನೀರಾವರಿ ಸೌಲಭ್ಯ ಇವೆ. ಉದಾಹರಣೆಗೆ ದೇವತ್ಕಲ್, ನಾಗರಾಳ್, ಹಂದ್ರಾಳ್ ಮತ್ತು
ಬೈಚಬಾಳ್, ಕೂಡಲಗಿ, ಹೆಬ್ಬಾಳ್, ತಳ್ಳಳ್ಳಿ, ಬೆನಕನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಇದುವರೆಗೆ ಒಂದು ಹನಿ ನೀರೂ ತಲುಪಿಲ್ಲ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಂದಾಯ ಇಲಾಖೆಯ ಪಹಣಿ ಪತ್ರಿಕೆಯಲ್ಲಿ ನೀರಾವರಿ ಎಂದು ನಮೂದಾಗಿದೆ. ಹೊಲದಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೆ ಗುಳೆ ಹೋಗುತ್ತಿದ್ದೇವೆ. ಒಣ ಬೇಸಾಯಕ್ಕೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳು ನಮಗೆ ಒಂಚೂರು ಮುಟ್ಟುತ್ತಿಲ್ಲವೆಂದು ಸ್ಥಳೀಯ ರೈತರು ಅಳಲು ತೋಡಿಕೊಂಡರು.  
ಇದನ್ನೆಲ್ಲಾ ಗಮನಿಸಿದ ಸರ್ಕಾರ, ಕಾಲುವೆ ನವೀಕರಣದೊಂದಿಗೆ ಪೋಲಾಗುತ್ತಿರುವ ನೀರನ್ನು ತಡೆದು, ನೀರು ತಲುಪದ ಜಮೀನುಗಳಿಗೆ ನೀರು ಒದಗಿಸಬಹುದೆಂದು ಮನಗಂಡಿತು. ಕೇಂದ್ರ ಸರ್ಕಾರದ ತ್ವರಿತ ನೀರಾವರಿ ಫಲಾನುಭವಿಗಳ ಯೋಜನೆಯಡಿ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ ನವೀಕರಣ ಕಾಮಗಾರಿಗಾಗಿ ಈಗಾಗಲೆ ಸರಕಾರ 551 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿಗಮದ ಮೂಲಗಳಿಂದ ತಿಳಿದು ಬಂದಿದೆ.
78 ಕಿ. ಮೀ. ಉದ್ದದ ಎನ್‌ಎಲ್ಬಿಸಿಯಲ್ಲಿ 2011ರಲ್ಲಿ 25 ಕಿ.ಮೀ.ನಷ್ಟು ನವೀಕರಣ ಮಾಡಿದ್ದನ್ನು ಸ್ಮರಿಸಬಹುದು.  
ಸರ್ಕಾರ ಕೈಗೆತ್ತಿಕೊಳ್ಳಲಿರುವ ಮುಖ್ಯ ಕಾಲುವೆ ನವೀಕರಣ ಕಾಮಗಾರಿಯಲ್ಲಿ 11.5 ಕಿ. ಮೀ. ಉದ್ದದ ಹುಣಸಗಿ ಶಾಖಾ ಕಾಲುವೆಯನ್ನು ಸೇರಿಸಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಶಾಖಾ ಕಾಲುವೆಯ ನವೀಕರಣದಿಂದ ಗೆದ್ದಲಮರಿ, ಏದಲಭಾವಿ, ಹೊಂಬಳಕಲ್, ಬೊಮ್ಮಗುಡ್ಡ, ರಾಜವಾಳ, ತೋಳದಿನ್ನಿ, ಕಕ್ಕೇರಿ, ಬೈಲಾಪುರ, ಸಿದ್ದಾಪುರ ಸೇರಿದಂತೆ ಸುಮಾರು 25 ಗ್ರಾಮಗಳ ಜಮೀನುಗಳಿಗೆ ನೀರಿನ ಅನುಕೂಲವಾಗಲಿದೆ ಎಂದು ಕೃಷ    ಾ ಭಾಗ್ಯ ಜಲ ನಿಗಮದ ನಾರಾಯಣಪುರ ಆಣೆಕಟ್ಟು ವಿಭಾಗದ ಇಇ ರಂಗರಾಮ್ ಹೇಳುತ್ತಾರೆ.
ಈಗಾಗಲೇ ಕಾಲುವೆಯ ನವೀಕರಣ ಕಾಮಗಾರಿಯ ವಿಷಯ ನಿಗಮದ ಆಡಳಿತ ಮಂಡಳಿ ಮುಂದಿದ್ದು, ಅದರ ಸಭೆಯ ನಂತರ ಟೆಂಡರ್  ಪ್ರಕ್ರಿಯೆ ಸೇರಿದಂತೆ ಎಲ್ಲ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎಂದು ಕೃಷ    ಾ ಜಲಭಾಗ್ಯ  ನಿಗಮದ ನಾರಾಯಣಪುರ ಆಣೆಕಟ್ಟು ವಿಭಾಗೀಯ ಕಚೇರಿ ಮೂಲಗಳು ಹೇಳಿವೆ.  
ಮೊದಲ ಹಂತದಲ್ಲಿ ಹುಣಸಗಿ ಶಾಖಾ ಕಾಲುವೆಯನ್ನು ಕೈಗೆತ್ತಿಕೊಂಡ ನಂತರ, ಮುಂದಿನ ಹಂತದಲ್ಲಿ ಇತರ ವಿತರಣಾ ಕಾಲುವೆಗಳ ನವೀಕರಣ ಮಾಡಲಾಗುವುದೆಂದು ಇಇ ರಂಗರಾಮ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement