ಹದಗೆಟ್ಟ ಕೇಶ್ವಾರ ರಸ್ತೆ: ಜನತೆಗೆ ತಪ್ಪದ ನರಕಯಾತನೆ
ಗುರುಮಠಕಲ್: ಇಲ್ಲಿನ ರಸ್ತೆಗಳ ಸ್ಥಿತಿ ಸಂಪೂರ ಹದಗೆಟ್ಟಿದ್ದು ಜನತೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಅದರೆ ಈ ಬಗ್ಗೆ ಗಮನ ಹರಿಸಬೇಕಾದವರು ಮಾತ್ರ ಗಾಢನಿದ್ದೆಯಲ್ಲಿದ್ದು ಸಾರ್ನಜನಿಕರ ಸಂಕಷ್ಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಪಟ್ಟಣದಿಂದ ನಾರಾಯಣಪೇಟ್ಗೆ ತೆರಳುವ ಚಂಡರಕಿ ಮಾರ್ಗದಲ್ಲಿ ಕೇಶ್ವಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ತೀರಾ ದುಸ್ಥಿತಿಯಲ್ಲಿದೆ. ಅದರೆ ಈ ಬಗ್ಗೆ ಗಮನ ಹರಿಸಬೇಕಾದವರು ಮಾತ್ರ ನಾಪತ್ತೆಯಾಗಿಬಿಟ್ಟಿದ್ದಾರೆ.
ರಸ್ತೆಯನ್ನು ನಿರ್ಮಿಸಿದ ದಿನದಿಂದ ಇಲ್ಲಿಯವರೆಗೆ ಒಂದು ದಿನವೂ ಕೂಡ ಈ ಕಡೆ ಗಮನಹರಿಸದೇ, ಇದರ ನಿರ್ವಹಣೆ ಬಗ್ಗೆ ಲಕ್ಷ್ಯ ವಹಿಸದೆ ಇರುವುದೇ ಇದೀಗ ರಸ್ತೆ ಈ ರೀತಿ ಹದಗೆಡಲು ಪ್ರಮುಖ ಕಾರಣವಾಗಿದೆ.
ಸುಮಾರು ಐದು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆ ಸೂಕ್ತ ನಿರ್ವಹಣೆಯ ಕೊರತೆ ಕಾರಣ ದಿನಕಳೆದಂತೆ ಹದಗೆಡುತ್ತಾ, ಇಲ್ಲಿ ರಸ್ತೆ ಇತ್ತೇ ಎಂಬ ಸಂದೇಹ ಮೂಡಿಸುವಂತಿದೆ. ರಸ್ತೆಗೆ ಹಾಕಿದ್ದ ಕಾಂಕ್ರೀಟ್ ಕಿತ್ತು ಬಂದಿದ್ದು ಇಲ್ಲಿ ರಸ್ತೆ ಇತ್ತು ಎನ್ನುವ ಕುರುಹು ಕೂಡ ಇಲ್ಲದಂತಹ ಸ್ಥಿತಿಗೆ ಬಂದು ತಲುಪಿದೆ.
ಅದರೆ ಈ ಭಾಗದ ಜನ ಪ್ರತಿನಿಧಿಗಳ ನಿರ್ಲಕ್ಷ್ಯತನದಿಂದಾಗಿ ರಸ್ತೆಯಲ್ಲಿ ಸಂಚರಿಸಬೇಕಾದ ವಾಹನಗಳು ರಸ್ತೆಯನ್ನು ಬಿಟ್ಟು ಪಕ್ಕದ ಮಣ ಿನಲ್ಲಿ ಪ್ರಯಾಣಿಸಬೇಕಾದ ಸ್ಥಿತಿ ಇದೆ. ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿನ ಜನಪ್ರತಿನಿಧಿಗಳ ಅಸಡ್ಡೆಯೇ ಕೇಶ್ವಾರ-ಚಂಡರಕಿ ನಡುವಣ ರಸ್ತೆ ಈ ಪರಿ ಹದಗೆಡಲು ಕಾರಣವಾಗಿದೆ.
ಯಾದಗಿರಿ ತಾಲೂಕು ಪಂಚಾಯತಿ ಅಧ್ಯಕ್ಷರು, ಜಿಲ್ಲಾ ಪಂಚಾಯತಿಯ ಅಧ್ಯಕ್ಷರುಗಳಾಗಿ ಅಧಿಕಾರ ಅನುಭವಿಸಿದವರೆಲ್ಲ ಇದೇ ಕ್ಷೇತ್ರದಿಂದಲೇ ಗೆಲುವು ಸಾಧಿಸಿ ದೊಡ್ಡ ಪದವಿಗಳನ್ನು ಅಲಂಕರಿಸಿದ್ದಾರೆ. ಆದರೆ ಈ ಮಂದಿ ನಂತರದ ದಿನಗಳಲ್ಲಿ ಈ ಕಡೆ ತಲೆ ಹಾಕಿಯೂ ಮಲಗಿಲ್ಲ ಎಂಬುದು, ಈ ರಸ್ತೆಯನ್ನು ನೋಡಿದ ಯಾರಿಗಾದರೂ ಅನಿಸದೆ ಇರದು.
ಅಧಿಕಾರಿಗಳು ಗಮನ ಹರಿಸಲಿ: ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ರಸ್ತೆಯ ಸ್ಥಿತಿಯನ್ನು ಸುಧಾರಿಸುವತ್ತ ಗಮನ ಹರಿಸಬೇಕಿದೆ. ಕಿತ್ತು ಹೋಗಿರುವ ರಸ್ತೆಯನ್ನು ಸಮರೋಪಾದಿಯಲ್ಲಿ ಸರಿಪಡಿಸಬೇಕು. ಇಲ್ಲದೇ ಹೋದಲ್ಲಿ ಜನ ಬೀದಿಗಿಳಿಯುವುದು ಅನಿನಾರ್ಯವಾಗುತ್ತದೆ. ಇದಕ್ಕೆ ಅಧಿಕಾರಿಗಳೇ ಹೊಣೆಗಾರರಾಲಿದ್ದಾರೆ.