ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಳ್ಳನ ಸೆರೆ; 4 ಬೈಕ್ ವಶ

Rashmi Kasaragodu
Updated On : 13 Feb 2014, 11:20 am

ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರ ಬೈಕ್ ಕಳ್ಳನೊಬ್ಬನನ್ನು ಬಂಧಿಸಿ, ಅವನಿಂದ 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಶಂಕರಗೌಡ ಪಾಟೀಲ್ ತಿಳಿಸಿದ್ದಾರೆ. ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಚಿತ್ತಾಪುರದ ಶ್ರೀಧರ ಈರಣ್ಣ ಚೌದರಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಅವನು ನೀಡಿದ ಮಾಹಿತಿಯಂತೆ 4 ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಪಿ ನೀಡಿದ ಮಾಹಿತಿಯಂತೆ ಕಳೆದ 3 ತಿಂಗಳಿಂದ ಪಟ್ಟಣದ ಶಹಾಬಾದ್ ಕ್ರಾಸ್, ವೆಂಕಟೇಶ್ವರ ಕಾಲೋನಿ, ದಿಗ್ಗಾಂವ ಕಂಚಗಾರಹಳ್ಳದ ಬಳಿ 3 ಬೈಕ್‌ಗಳನ್ನು ಕಳವು ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೊಬ್ಬ ಪ್ರಮುಖ ಸಹಚರ ಎಲ್ಲಪ್ಪ ದೇವಿಂದ್ರಪ್ಪ ಪುಂಗಿ ನಾಪತ್ತೆಯಾಗಿದ್ದಾನೆ. ಡಿವೈಎಸ್ಪಿ ಮಹೇಶ ಮೇಘಣ್ಣನವರ ಮಾರ್ಗದರ್ಶನದಲ್ಲಿ ಸಿಪಿಐ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಪಿಎಸ್‌ಐ ಸಂಜಿವಕುಮಾರ ಹಾಗೂ ಸಿಬ್ಬಂದಿ ಬಲವಂತರೆಡ್ಡಿ, ನಾಗೇಂದ್ರಪ್ಪ, ನಾಸಿರುದ್ದೀನ್, ಭಾಗಪ್ಪ, ಭಾಗಣ್ಣ, ಬಸವರಾಜರ ತಂಡವು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement