ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತೆರವಾದ ಗ್ರಾಪಂ.ಸ್ಥಾನಗಳಿಗೆ ಚುನಾವಣೆ

Rashmi Kasaragodu
Updated On : 13 Feb 2014, 11:22 am

ಯಾದಗಿರಿ: ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ತಾಲೂಕುಗಳ ಗ್ರಾಪಂ.ಗಳಲ್ಲಿ ವಿವಿಧ ಕಾರಣಗಳಿಂದ ಖಾಲಿಯಾಗಿರುವ ಸ್ಥಾನಗಳನ್ನು ತುಂಬಲು ಚುನಾವಣಾ ವೇಳಾಪಟ್ಟಿ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಮಾದಾರ್ ತಿಳಿಸಿದ್ದಾರೆ. ಯಾದಗಿರಿ ತಾಲೂಕಿನ ಕಾಳೆಬೆಳಗುಂದಿ, ಮಲ್ಹಾರ, ರಾಮಸಮುದ್ರ, ಸುರಪುರ ತಾಲೂಕಿನ ಖಾನಾಪೂರ ಎಸ್.ಹೆಚ್, ಪೇಠ ಅಮ್ಮಾಪುರ, ಶಹಾಪುರ ತಾಲ್ಲೂಕಿನ ಮೂಡಬೂಳ, ಬೆಂಡೆಬೆಂಬಳಿ ಗ್ರಾಮ ಪಂಚಾಯತಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ  ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆ.19 ಕೊನೆಯ ದಿನ.  20ರಂದು ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯಲು ಫೆ.22 ಕೊನೆಯ ದಿನ. ಅವಶ್ಯವಿದ್ದರೆ, ಮಾ.2ರಂದು ಚುನಾವಣೆ ನಡೆಯಲಿದೆ. ಬೆ.7ರಿಂದ  ಸಂಜೆ 5ರವರೆಗೆ  ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದರೆ ಮಾ. 4ರಂದು ನಡೆಸಲಾಗುವುದು. ಮಾ. 5ರಂದು ಮತಗಳ ಎಣಿಕೆ (ತಾಲೂಕಿನ ಕೇಂದ್ರ ಸ್ಥಳದಲ್ಲಿ) ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement