ದೇವಿ ಜಾತ್ರೆ: ಪ್ರಾಣಿ ಬಲಿ ನಿಷೇಧ
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಹಿರೇವಡಿಗೇರಾ ಗ್ರಾಮದಲ್ಲಿ ಫೆ. 18ರಂದು ದೇವಿ ಜಾತ್ರೆ ನಡೆಯುವ ಸ್ಥಳದ ಸುತ್ತ-ಮುತ್ತಲಿನ 1 ಕೀ.ಮೀ ವ್ಯಾಪ್ತಿಯಲ್ಲಿ ಫೆ.17ರ ಮಧ್ಯರಾತ್ರಿಯಿಂದ ಫೆ. 18ರ ಮಧ್ಯರಾತ್ರಿಯವರಿಗೆ ಪ್ರಾಣಿ ಬಲಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಎಫ್. ಆರ್. ಜಮಾದಾರ್ ಆದೇಶ ಹೊರಡಿಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಿವ ಮಹಾಪೂಜೆ ಕಾರ್ಯಕ್ರಮ
ಗುರುಮಠಕಲ್: ಪಟ್ಟಣದಲ್ಲಿ ಶಿವ ಮಾಲ ಧಾರಿಗಳಿಂದ ಶಿವ ಮಹಾಪೂಜೆ ಕಾರ್ಯಕ್ರಮ ಹಾಗೂ ಜ್ಯೋತಿ ಯಾತ್ರೆ ಕಾರ್ಯಕ್ರಮಗಳೂ ಜಾರುಗಿದವು. ಇದೇ ಸಂದರ್ಭದಲ್ಲಿ ಇಲ್ಲಿನ ನಾಗರೇಶ್ವರ ಮಂದಿರದಿಂದ ಮುಖ್ಯ ಬೀದಿಗಳಲ್ಲಿ ಶಿವಲಿಂಗದ ಆಕಾರದ ಸ್ತಬ್ದ ಚಿತ್ರದ ಮೆರವಣಿಗೆ ಹಾಗೂ ಜ್ಯೋತಿ ಯಾತ್ರೆಯನ್ನು ನಡೆಸಲಾಯಿತು. ನಂತರ ದೇವಸ್ಥಾನದಲ್ಲಿ ಮಹಾಪೂಜೆ ನೆರವೇರಿಸಿ ಬಂದಿರುವ ಭಕ್ತರಿಗೆ ಅನ್ನದಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮತಕ್ಷೇತ್ರದ ವಿವಿಧ ಗ್ರಾಮಗಳ ಶಿವ ಭಕ್ತರು ಹಾಜರಾಗಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.