ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾದಗಿರಿ ಎಪಿಎಂಸಿ ಅಧ್ಯಕ್ಷರಾಗಿ ರಾಠೋಡ ಅವಿರೋಧ ಆಯ್ಕೆ

Rashmi Kasaragodu
Updated On : 13 Feb 2014, 11:23 am

ಯಾದಗಿರಿ: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಆವಿಶ್ವಾಸದ ಸಮರವನ್ನು ಸಾರಿ ಭೀಮಣಗೌಡಕ್ಯಾತನಾಳ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಳೆದ ತಿಂಗಳ 10 ರಂದು ಪದಚ್ಯುತಿಗೊಳಿಸಲಾಗಿತ್ತು. ಅವರ ಪದಚ್ಯುತಿಯ ನಂತರದಲ್ಲಿ ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಭೀಮು ರಾಠೋಡ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 16 ಜನ ಸದಸ್ಯ ಬಲವನ್ನು ಹೊಂದಿರುವ ಇಲ್ಲಿನ ಎಪಿಎಂಸಿಯಲ್ಲಿ ಒಟ್ಟು ಚುನಾಯಿತ 13 ಸದಸ್ಯರು ಹಾಗೂ 3 ಜನ ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 16 ಸದಸ್ಯರಲ್ಲಿ ಕಾಂಗ್ರೆಸ್-4 ಚುನಾಯಿತರು ಹಾಗೂ 3 ಜನ ನಾಮ ನಿರ್ದೇಶಿತರು ಸೇರಿ 7, ಬಿಜೆಪಿ-7 ಹಾಗೂ ಜೆಡಿಎಸ್-2 ಸದಸ್ಯರು ಇದ್ದರು. ಇದರಲ್ಲಿ ಭೀಮು ರಾಠೋಡ ಒಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರು, ಈ ಹಿನ್ನಲ್ಲೆಯಲ್ಲಿ ಭೀಮು ರಾಠೋಡ ಅವರನ್ನು ಇದಿಗಾ ಉಳಿದಿರುವ ಏಳು ತಿಂಗಳ ಅವಧಿಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಗುರು ಪಾಟೀಲ್ ತಿಳಿಸಿದ್ದಾರೆ.
ವಿಜಯೋತ್ಸವ: ಭೀಮು ರಾಠೋಡ ಅವರು ಅವಿರೋಧವಾಗಿ ಆಯ್ಕೆಯಾಗುತ್ತಲ್ಲಿದ್ದಂತೆ ಅವರ ಅಭಿಮಾನಿಗಳು ವಿಜಯೋತ್ಸವ ಅಚರಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement