ಅಲ್ಲೂರ ಗ್ರಾಪಂ ನಿರ್ಲಕ್ಷ್ಯ; ಬೀಗ
ಚಿತ್ತಾಪುರ: ತಾಲೂಕಿನ ಅಲ್ಲೂರ ಬಿ. ಗ್ರಾಮಕ್ಕೆ ಒಳಚರಂಡಿ, ಸಿಸಿ ರಸ್ತೆ, ಸಾರ್ವಜನಿಕ ಶೌಚಾಲಯ, ನಿರ್ಮಿಸಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನರಿಗೆ ಸಕಾಲಕ್ಕೆ ಸಹಾಯಧನ ನೀಡಬೇಕೆಂದು ಒತ್ತಾಯಿಸಿ ಅಲ್ಲೂರ ಗ್ರಾಮ ಘಟಕದ ಕರವೇ ಪದಾದಿಕಾರಿಗಳು ಗ್ರಾಪಂ.ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವನ್ನು ಕರವೇ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ವಿಜಾಪುರಕರ್, ಕೋಲಿ ಸಮಾಜದ ಯುವ ಅಧ್ಯಕ್ಷ ಕರಣಪ್ಪ ಭೂನಿ, ವಲಯ ಅಧ್ಯಕ್ಷ ಬಾಸ್ಕರ್, ಗ್ರಾಮ ಘಟಕ ಅಧ್ಯಕ್ಷ ದುರಗಣ್ಣ ವಿಜಾಪುರಕರ್ ವಹಿಸಿದರು.
ಪ್ರತಿಭಟನೆಯಲ್ಲಿ ಶಂಕರ ವಿಜಾಪುರಕರ್, ಕೂಲಿ ಯುವಸಮಾಜದ ಅಧ್ಯಕ್ಷ ಕರಣಪ್ಪ ಬೂನಿ, ಮಹಾದೇವ ತೆಲಗರ್, ಬಸವರಾಜ ಸೇರಿ ಬಸವರಾಜ ಮಡಿವಾಳ, ದೇವಿಂದ್ರಪ್ಪ, ದುರಗಣ್ಣ ಗಮಾಗ, ನಾಗರಾಜ ಅಳ್ಳಳ್ಳಿ, ಮರಗಪ್ಪ ಅಳ್ಳಳ್ಳಿ, ಶರಣಬಸಪ್ಪ ಪೂಜಾರಿ, ಅರಣಕುಮಾರ ಭಿಮನಹಳ್ಳಿ ಸೇರಿದಂತೆ ಅನೇಕರು ಇದ್ದರು.
ಗ್ರಾಮದಲ್ಲಿ ಪ್ರತಿಭಟನೆ ಮಾಡಿ ಗ್ರಾಮ ಪಂಚಾಯತಿಗೆ ಬಂದು ಬೀಗ ಮುದ್ರೆ ಹಾಕಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಾಲೂಕು ಪಂಚಾಯಿತಿ ಸಿಬ್ಬಂದಿ ಬಂದು ಮನವಿ ಪತ್ರ ಸ್ವೀಕರಿಸಿದರು.