ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾನೂನು ಅರಿವಿಗಾಗಿ ಸಂಚಾರಿ ಕಾನೂನು ರಥ ಅಭಿಯಾನ

Rashmi Kasaragodu
Updated On : 14 Feb 2014, 11:58 am

ಶಹಾಪುರ: ತಾಲೂಕಿನಲ್ಲಿ ಕಾನೂನಿನ ಕುರಿತು ಕನಿಷ್ಠ ಜ್ಞಾನ, ಅರಿವು ಮೂಡಿಸುವ ದಿಸೆಯಲ್ಲಿ ಕನೂನಿನ ಬಗ್ಗೆ ಮಾಹಿತಿ ನೀಡಲು ಫೆ.16ರಿಂದ 18ರವರೆಗೆ ಶಹಾಪುರ ತಾಲೂಕಿನ ನಾನಾ ಕಡೆ ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಹೆಚ್. ದೇವರಾಜ ಶಹಾಪುರ ಹೇಳಿದರು.
  ಪಟ್ಟಣದ ನ್ಯಾಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದಂತೆ ಶಹಾಪುರ ತಾಲೂಕಿನಲ್ಲಿ ಕಾನೂನು ರಥ ಸಂಚರಿಸಲಿದ್ದು, ಜತೆಜತೆಗೆ ಹಳ್ಳಿಗಳಲ್ಲಿ ನುರಿತ ಕಾನೂನು ತಜ್ಞರಿಂದ ಕಾನೂನಿನ ಉಪನ್ಯಾಸ ಮತ್ತು ತಿಳಿವಳಿಕೆ ನೀಡಲಾಗುತ್ತದೆ. ಕಾನೂನು ಅರಿವು ಶಿಬಿರದ ಮೂಲಕ ಈಗಾಗಲೇ ನಿಗದಿ ಪಡಿಸಿದ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ  ಯಾವುದೇ ಖರ್ಚು ಇಲ್ಲದೆ, ರಾಜಿ ಸಂಧಾನಗಳ ಮೂಲಕ ಪ್ರಕರಣ ಇತ್ಯರ್ಥ ಪಡಿಸಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
  ಜಿಲ್ಲಾ ಕಾನೂನು ಪ್ರಾಧಿಕಾರ ಯಾದಗಿರಿ, ತಾಲೂಕಾ ಕಾನೂನು ಸೇವಾ ಸಮಿತಿ ಶಹಾಪುರ, ಹಾಗು ತಾಲೂಕಾ ನ್ಯಾಯಾವಾದಿಗಳ ಸಂಘ ಮತ್ತು ತಾಲೂಕಾಡಳಿತ, ತಾಲೂಕ ಪಂಚಾಯತ, ಶಿಕ್ಷಣ ಇಲಾಖೆ, ಹಾಗು ಪೊಲೀಸ್ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಗಳ ಇಲಾಖೆಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ  ನಡೆಸಲಾಗುತ್ತಿದೆ.
ಕಾರ್ಯಕ್ರಮದ ವಿವರ: ಫೆ.16ರಂದು ಸ್ಥಳೀಯ ನ್ಯಾಯಾಲಯದ ಆವರಣ, ತಾಲೂಕಿನ ವಡಗೇರಾ, ತುಮಕೂರ, ಬೆಂಡೆಬೆಂಬಳಿ ಗ್ರಾಮಗಳಲ್ಲಿ ಕಾನೂನು ರಥ ಸಂಚರಿಸಲಿದೆ. 17ರಂದು ಗೋಗಿ, ನಾಗನಟಗಿ, ಹೋತಪೇಟದಲ್ಲಿ ಕಾನೂನು ತಿಳಿವಳಿಕೆ ನೀಡಲಾಗುವುದು.
  18ರಂದು ಭೀಮರಾಯನಗುಡಿ ಕೃಷಿ ಕಾಲೇಜಿನಲ್ಲಿ, ಶಿರವಾಳ, ಸಗರ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಲಿದೆ.  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement