ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸ್ ತಡೆದು ಪ್ರತಿಭಟನೆ

Rashmi Kasaragodu
Updated On : 14 Feb 2014, 11:58 am

ಗುರುಮಠಕಲ್: ತಮ್ಮ ಗ್ರಾಮದಿಂದ ಸುಮಾರು ಬಸ್‌ಗಳು ಹಾದು ಹೋದರೂ ಯಾವ ಒಂದು ಬಸ್ ನಮ್ಮ ಗ್ರಾಮದಲ್ಲಿ ನಿಲ್ಲುವುದಿಲ್ಲ ಎಂದು ಆರೋಪಿಸಿ ಬೋರಬಂಡ ಗ್ರಾಮದ ವಿದ್ಯಾರ್ಥಿಗಳು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಹಚ್ಚಿ ಪ್ರತಿಭಟನೆ ನಡೆಸಿದರು.
8- 15 ರಿಂದ 9 ಗಂಟೆವರೆಗೆ ಯಾದಗಿರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಬರುವ ಬಸ್‌ಗಳು ಎಲ್ಲಾವೂ ಬೋರಬಂಡ ಗ್ರಾಮದಿಂದ ಹಾದು ಹೋದರು ಯಾವುದೇ ಬಸ್ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಶಾಲ ಕಾಲೇಜುಗಳಿಗೆ ಹೊಗಬೇಕಾದರೆ ಸಮಸ್ಯೆಯಾಗುತ್ತಿದೆ. ಒಂದು ವೇಳೆ ಬಸ್‌ನ್ನು ಬಿಟ್ಟು ಖಾಸಗಿ ವಾಹನಗಳಿಗೆ ಹೊಗಬೇಕಾದರೆ ಮುಂಗಡವಾಗಿ ಎಲ್ಲಾರೂ ಬಸ್‌ಪಾಸ್ ಪಡೆದಿರುವ ಹಿನ್ನೆಲೆಯಲ್ಲಿ ಬಸ್ಸಿಗಾಗಿ ಕಾಯುವುದು ಅನಿವಾರ್ಯ ಎಂದು ಆರೋಪಿಸಿ ರಸ್ತರೋಕೊ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಆಗಿ ಬಸ್ ಸಂಚಾರ ಸ್ಥಗಿತವಾಗಿತ್ತು. ನಂತರ ಗ್ರಾಮದ ಪ್ರಮುಖರು ಹಾಗೂ ಪೊಲೀಸ್, ಸಾರಿಗೆ ಇಲಾಖೆಯ ಅಧಿಕಾರಗಳ ಮಧ್ಯಸ್ಥಿಕೆಯಿಂದ ಮಕ್ಕಳು ಪ್ರತಿಭಟನೆ ಹಿಂದಕ್ಕೆ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement