ಬಿಂದುಮಾಧವಾಚಾರ್ಯ ಕೊಲ್ಹಾರ್ ನಿಧನ
ಗುಲ್ಬರ್ಗ: ಇಲ್ಲಿನ ಬ್ರಹ್ಮಪುರ ಒಂಟಿಖಾನಿ ನಿವಾಸಿ ಬಿಂದುಮಾಧವಾಚಾರ್ಯ (ಪಾಪಣ್ಣ) ಕೊಲ್ಹಾರ್ (62) ಅಲ್ಪಕಾಲದ ಅಸ್ವಸ್ಥತೆ ನಂತರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು, ಅಪಾರ ಬಂಧುಬಳಗ ಅಗಲಿದ್ದಾರೆ. ಬ್ರಹ್ಮಪುರ ರಾಯರ ಮಠದಲ್ಲಿನ ಬೆಳಗಿನ ನಿರ್ಮಾಲ್ಯ ಪೂಜೆ ನೆರವೇರಿಸಿ ಮನೆಗೆ ಬಂದಿದ್ದ ಅವರು ಎದೆನೋವು ಎಂದು ಕುಸಿದಿದ್ದು, ಅಲ್ಲೇ ಮೃತಪಟ್ಟಿದ್ದಾರೆಂದು ಅವರ ಕಟುಂಬ ಮೂಲಗಳು ಹೇಳಿವೆ. ಇವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ಗುರುವಾರ ನ್ಯೂರಾಘವೇಂದ್ರ ಕಾಲೋನಿ ರುದ್ರಭೂಮಿಯಲ್ಲಿ ನೆರವೇರಿತು. ನಿಧನಕ್ಕೆ ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ ಶೋಕ ವ್ಯಕ್ತಪಡಿಸಿದ್ದಾರೆ.