ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ವಿಜ್ಞಾನ ತರಗತಿ ಕೋಣೆಗೆ ಸೀಮಿತವಾಗದಿರಲಿ'

Rashmi Kasaragodu
Updated On : 14 Feb 2014, 11:50 am

ಗುಲ್ಬರ್ಗ: ಪ್ರತಿಯೊಬ್ಬರೂ ವಿಜ್ಞಾನ ಕಲಿಯುವಂತಾಗಬೇಕು, ಅದನ್ನೇ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಈ ವಿಷಯ ತರಗತಿಯ ಕೋಣೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಸರಳೀಕರಣಗೊಳ್ಳಬೇಕೆಂದು ಶಹಾಬಾದ್‌ನ ಎಸ್.ಎಸ್. ಮರಗೋಳ ಕಾಲೇಜಿನ ಪ್ರಾಚಾರ್ಯ ಡಾ. ಅನಿಲಕುಮಾರ ಕೊಪ್ಪಳಕರ್ ಅಭಿಪ್ರಾಯಪಟ್ಟರು. ಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ವಿಶ್ವಭಾರತಿ ಪಪೂ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಅಂತರ ವಿವಿ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಭೌತ ವಿಜ್ಞಾನ ವಿಭಾಗದಲ್ಲಿ ಕುಮಾರಿ ಸೌಮ್ಯಶ್ರೀ ಪ್ರಥಮ ಸ್ಥಾನ, ಶಿವರುದ್ರಯ್ಯ ಸಾನಿಮಠ, ಪ್ರದೀಪ ಜ್ಯಾಂತೆ ದ್ವಿತೀಯ ಸ್ಥಾನ, ಜೀವ ವಿಜ್ಞಾನದಲ್ಲಿ ಅಂಬರೀಷ ಯಾಕಾಪುರ ಪ್ರಥಮ ಸ್ಥಾನ, ಕುಮಾರಿ ಸುನಿತಾ ಎಸ್.ಆರ್ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement