ಸಾವೂರ ದೊಡ್ಡಪ್ಪ ತಾತನ ನೂತನ ರಥೋತ್ಸವ
ಸೈದಾಪುರ: ಇಲ್ಲಿಗೆ ಸಮೀಪದ ಸಾವೂರ ಗ್ರಾಮದ ದೊಡ್ಡಪ್ಪತಾತ ದೇವಸ್ಥಾನದಲ್ಲಿ ದೊಡ್ಡಪ್ಪ ತಾತ ಶಿವಶರಣರ ಆರಾಧನ ಹಾಗೂ ನೂತನ ರಥೋತ್ಸವವು ಮಂಗಳವಾರದಂದು ಅದ್ಧೂರಿಯಾಗಿ ಜರುಗಿತು. ಉಚ್ಚಾಯ ಮಹೋತ್ಸವ, ಭಜನೆ, ಪಲ್ಲಿಕಿ ಉತ್ಸವ, ಪುರವಂತಿಕೆ ಸೇವೆ, ಮಾಚನೂರ ಬಸವೇಶ್ವರ ಸಂಘದವರಿಂದ ನಂದಿಕೋಲು ಸೇವೆ, ಗಣರಾಧನೆ ಹಾಗೂ ಸಾಯಂಕಾಲ ನೂತನ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ವೇ.ಮೂ.ವೀರಯ್ಯಸ್ವಾಮಿ ಹಿರೇಮಠ ಸಾವೂರ, ಬಾಡಿಯಾಲದ ಷ.ಬ್ರ.ಗುರುಲಿಂಗ ಶಿವಾಚಾರ್ಯರು, ಕಟ್ಟಿಮನಿ ಸಂಸ್ಥಾನ ಹಿರಿಯಮಠ ಮಲ್ಕೋಡ ಹಾಗೂ ಮೂಲಮಠ ಸಂಸ್ಥಾನ ಕಿಣಕೇರಿ, ವೆ.ಮೂ.ಬಸ್ಸಯ್ಯ ಶರಣರು ಚರಬಸವೇಶ್ವರ ಸಂಸ್ಥಾನ ಶಹಾಪುರ, ವೆ.ಮೂ.ಡಾ.ಕ್ಷೀರಲಿಂಗ ಸ್ವಾಮಿಗಳು ಚೇಗುಂಟಾ, ವಿವಿಧ ಗ್ರಾಮಗಳ ಭಕ್ತಾದಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.