ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಪುರಸಭೆ ಸಾಮಾನ್ಯ ಸಭೆ

Vishwanath S
Updated On : 15 Feb 2014, 1:07 am

ಸುರಪುರ: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶನಿವಾರ ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ.
ಹಿಂದಿನ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆ ನಡವಳಿಕೆ ದೃಢೀಕರಿಸುವ ಬಗ್ಗೆ, ಸೆಪ್ಟೆಂಬರ್-2013 ರಿಂದ ಡಿಸೆಂಬರ್-2013 ಮತ್ತು ಜನವರಿ-2014ರ ತಿಂಗಳ ಆದಾಯ ಮತ್ತು ಖರ್ಚುಗಳಿಗೆ ಒಪ್ಪಿಗೆ ಕೂಡುವ ಬಗ್ಗೆ ಚರ್ಚೆ ನಡೆಯಲಿದೆ. 2012-13ನೇ ಸಾಲಿನ ಎಸ್‌ಎಫ್ಸಿ ಯೋಜನೆಯಡಿ ರೂ. 4.78 ಲಕ್ಷ ಕ್ರಿಯಾ ಯೋಜನೆ ಮತ್ತು 2014-15ನೇ ಸಾಲಿನ 13ನೇ ಹಣಕಾಸು ಯೋಜನೆಯಡಿಯಲ್ಲಿ ರಸ್ತೆ, ಸೇತುವೆ ಕಾಮಗಾರಿ ಅನುದಾನದಡಿ ರೂ. 25 ಲಕ್ಷ ಕ್ರಿಯಾ ಯೋಜನೆಗೆ ಅನುಮೋದನೆ ನೀಡುವುದೂ ಸೇರಿದಂತೆ ಇನ್ನಿತರ ವಿಷಯಗಳು ಚರ್ಚೆಗೆ ಬರಲಿವೆ ಎಂದು ಮುಖ್ಯಾಧಿಕಾರಿ ಏಜಾಜ್ ಹುಸೇನ್ ಹೇಳಿದ್ದಾರೆ.
ಶರಣರು ಜಗತ್ತಿಗೆ ಮಾದರಿ
ಹುಣಸಗಿ: ಸಮೀಪದ ಸದಬ ಗ್ರಾಮದಲ್ಲಿ ಕಾಶಿ ವಿಶ್ವನಾಥ ಲಿಂಗ ಹಾಗೂ ಪವಾಡ ಪುರುಷ ಯಲ್ಲಾಲಿಂಗ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಶರಣರು ನಡೆದು ಬಂದ ದಾರಿ ಎಂಬ ಪ್ರವಚನ ಕಾರ್ಯಕ್ರಮ ನಡೆಯಿತು. ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯಂದಿರಾದ ದೊಡ್ಡಬಸಯ್ಯ ಶಾಸ್ತ್ರಿ, ಹಿರೇಮಠ ಮಾತನಾಡಿ, ಶರಣರು ನುಡಿದಂತೆ ನಡೆದು ಜಗತ್ತಿಗೆ ದಾರಿ ದೀಪವಾಗಿದ್ದಾರೆ ಎಂದರು. ಯಲ್ಲಾಲಿಂಗ ಶರಣರ ಜೀವನ ಚರಿತ್ರೆ ಹಾಗೂ ಅವರ ಪವಾಡವನ್ನು ತಿಳಿಸಿದರು. ಗುಂಡಕನಾಳ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅವ್ವಣ್ಣಸ್ವಾಮಿ ಮಠ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಶಾಂತಗೌಡ ಪಾಟೀಲ್, ಶಾಂತಗೌಡ ಕವಿತಾಳ, ಗುರುನಾಥಗೌಡ ಪೊ.ಪಾ, ತಿಪ್ಪಣ್ಣ ವಿಶ್ವಕರ್ಮ, ನಾಗನಗೌಡ ಪಾಟೀಲ್, ವೀರೇಶ ಶರಣರು, ಹೂವಪ್ಪ ಚೌದ್ರಿ, ಪರಮಣ್ಣ ಚೌದ್ರಿ, ಗಾಯಕ ರಾಚಯ್ಯ ಮದರಿ, ಶರಣಪ್ಪ ಮಾಸ್ತರ ಕವಿತಾಳ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಗುರಣ್ಣ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮೃತರ ಕುಟುಂಬಗಳಿಗೆ ಗೃಹಬಳಕೆ ವಸ್ತುಗಳ ವಿತರಣೆ
ಸುರಪುರ: ನವೆಂಬರ್-2013ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಬೆಂಗಳೂರಿನ ಜೆಪಿ ಡಿಸ್ಟೆಲರಿ ಕಂಪನಿಯು ಅಬಕಾರಿ ಇಲಾಖೆ ನೇತೃತ್ವದಲ್ಲಿ ಗೃಹ ಬಳಕೆಯ ವಸ್ತುಗಳನ್ನು ವಿತರಿಸಿದರು. ಉಪ್ಪಲದಿನ್ನಿ ತಾಂಡಾ, ಮಾವಿನಗಿಡದ ತಾಂಡಾ, ಕುರಕೈನಾಳ ತಾಂಡಾ, ಐಬಿ ತಾಂಡಾ, ಜಮಲಪುರ ತಾಂಡಾದ ಮಂದಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ ಸಂಬಂಧಿಕರಿಗೆ ಜೆ.ಪಿ. ಡಿಸ್ಟಲರಿಯ ವ್ಯವಸ್ಥಾಪಕ ಜೆ.ಪಿ. ನಾರಾಯಣ, ಕಂಪನಿಯ ಗುಲ್ಬರ್ಗ ವಲಯದ ಎಂಡಿ ಎಸ್.ಆರ್. ಬಿರಾದಾರ್ ಕಂಪನಿ ವತಿಯಿಂದ ಮನೆ ಬಳಿಕೆ ಸಾಮಾನುಗಳನ್ನು ನೀಡಿದರು. ಅಬಕಾರಿ ಅಧಿಕಾರಿಗಳಾದ ಮಹ್ಮದ್ ಇಸ್ಮಾಯಿಲ್ ಇನಾಂದಾರ್, ಭಾರತಿ, ನೂರುಲ್ಲಾಖಾನ್, ಲಿಂಗರಾಜ್, ಮಂಜುನಾಥ, ಲಕ್ಷ್ಮಣ, ಗೋಪಾಲ ದೇವಿಕೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement