ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕನಕ ಯುವ ಸೇನೆಯಿಂದ ಸಿಎಂಗೆ ಮನವಿ

Vishwanath S
Updated On : 15 Feb 2014, 1:07 am

ಸುರಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನಕ ಯುವ ಸೇನೆ ಉತ್ತರ ಕರ್ನಾಟಕದ ಅಧ್ಯಕ್ಷ ರಂಗನಗೌಡ ಪಾಟೀಲ ದೇವಿಕೇರಿ ನೇತಣತ್ವದಲ್ಲಿ ಜಿಲ್ಲಾ ಘಟಕವು ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಶಹಪುರ, ಸುರಪುರ, ಯಾದಗಿರಿ ತಾಲೂಕುಗಳಲ್ಲಿ 2 ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ ಮಾಡಬೇಕು. ಇತ್ತೀಚಿಗೆ ಶಹಪುರ ತಾಲೂಕಿನ ಮದ್ರಿಕಿ ಗ್ರಾಮದ ಬಳಿ ಸಂಭವಿಸಿದ ಲಾರಿ ದುರಂತದಲ್ಲಿ ಕುರಿಗಳೊಂದಿಗೆ ಮೃತಪಟ್ಟ 3 ಜನ ಕುರಿಗಾಯಿಗಳ ಮೃತ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ಪರಿಹಾರ ಧನ ಘೋಷಿಸಬೇಕು ಎಂದು ಒತ್ತಾಯಿಸಿದೆ.
ಸುರಪುರ ತಾಲೂಕಿನಲ್ಲಿ ಕುರುಬ ಸಮುದಾಯದವರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ರಾಜಕೀಯ ವ್ಯಕ್ತಿಗಳು ಕುರುಬ ಸಮಾಜದವರ ಮೇಲೆ ದೌರ್ಜನ್ಯವೆಸಗಿ ಜಾತಿ ನಿಂದನೆ ಸುಳ್ಳು ಕೇಸುಗಳನ್ನು ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕುರುಬರಿಗೆ ಕುರಿ ಸಾಕಾಣಿಕೆ ಮಾಡಲು ಶೇ. 0.50 ಪೈಸೆ ಬಡ್ಡಿ ದರದಲ್ಲಿ 50 ಲಕ್ಷದವರೆಗೆ ಬ್ಯಾಂಕ್‌ಗಳ ಮೂಲಕ ಸಾಲ ಒದಗಿಸಿಕೊಡಬೇಕು. ಮತ್ತು ತಿಂಥಣಿ ಕನಕ ಗುರುಪೀಠದಲ್ಲಿ ಮಂಜುರಾದ ಡೊಳ್ಳು ತಯಾರಿಕೆ ಘಟಕಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಸೇನೆಯ ಜಿಲ್ಲಾಧ್ಯಕ್ಷ ರಂಗನಗೌಡ ಪಾಟೀಲ್ ದೇವಿಕೇರಿ, ಸೇನೆಯ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ರಾಘವೇಂದ್ರ ಮಾಚಗುಂಡಾಳ ಇನ್ನಿತರ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement