ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆರೋಗ್ಯ ಸಚಿವರಿಗೆ ಸಂಘ ಒತ್ತಾಯ

Mainashree
Updated On : 17 Feb 2014, 10:52 am

ಗುಲ್ಬರ್ಗ: ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್ ಸಂಘದಡಿಯಲ್ಲಿ ಫಾರ್ಮಾಸಿಸ್ಟ ನೌಕರರು ಪ್ರಮುಖ ಬೇಡಿಕೆಗಳ ಈಡೇರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಲ್ಲಿ ಮನವಿ ಮಾಡಿದರು. ತಾಂತ್ರಿಕ ವಿದ್ಯಾ ರ್ಹತೆ ಹೊಂದಿ ಫಾರ್ಮಾಸಿಸ್ಟ್ರೆಂದು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅದಕ್ಕೆ ಸರಿಸಮಾನ ವೇತನ ನೀಡುವುದು ಫಾರ್ಮಾಸಿಸ್ಟ್ (ಪ್ರಸ್ತುತ ವೇತನ 14,550ರಿಂದ 26,700, ಪರಿಷ್ಕ್ರತ ಮಾಡಬೇಕಾದ ವೇತನ 17,650ರಿಂದ 26,700), ಹಿರಿಯ  ಫಾರ್ಮಾಸಿಸ್ಟರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ (ಪ್ರಸ್ತುತ ವೇತನ 16,000ರಿಂದ 29,600, ಪರಿಷ್ಕ್ರತ ಮಾಡಬೇಕಾದ ವೇತನ 20,000- 36,300) ಸರಿ ಸಮಾನವಾದ ನ್ಯಾಯಯುತ ವೇತನ ಶ್ರೇಣಿ ದೊರಕಿಸಬೇಕು.
ಡೆಪ್ಯೂಟಿ ಚೀಫ್ ಫಾರ್ಮಾಸಿಸ್ಟ್, ಚೀಫ್ ಫಾರ್ಮಾಸಿಸ್ಟ  ಹುದ್ದೆಗಳನ್ನು ಒದಗಿಸಿಕೊಡುವುದು, ಪದೋನ್ನತಿ ನೀಡಿದ ದಿನಾಂಕದಿಂದಲೇ ಬಡ್ತಿಯನ್ನು ನೀಡಬೇಕು, ಫಾಮಾಸಿಸ್ಟ್ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಮಾಡಬೇಕು, ಸರ್ಕಾರಿ ಹುದ್ದೆಗಳನ್ನು ಅವಶ್ಯವಿರುವ ಕಡೆ ಸೃಷ್ಟಿಸಿ ಪರವಾನಗಿ ಪಡೆಯುವುದರೊಂದಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಜಿಲ್ಲಾಧ್ಯಕ್ಷ ಅನಿಲಕುಮಾರ್ ಪ್ರಧಾನ ಕಾರ್ಯದರ್ಶಿ ಬಿ.ಎಸ್. ದೇಸಾಯಿ ಕೋರಿದ್ದಾರೆ.

ಇತರೆ ಯೋಜನೆಗಳು ಹೀಗಿವೆ...
= ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಶಿಕ್ಷಕರ ನೇಮಿಸಲು ಕ್ರಮ
= ತಜ್ಞರ ಸಮಿತಿ ರಚಿಸಿ ಸಮಾಜದ ಸಾಮರಸ್ಯ ಕಾಪಾಡುವುದು, ವಿದ್ಯಾರ್ಥಿಗಳ ನೈತಿಕ ಮಟ್ಟ ಹೆಚ್ಚಿಸಿ ವ್ಯಕ್ತಿತ್ವ ವಿಕಸನ, ವೈಜ್ಞಾನಿಕ ಶಿಕ್ಷಣವನ್ನು ಮೇಲಕ್ಕೆತ್ತುವ ಉದ್ದೇಶ.
= ಸರ್ವ ಜನಾಂಗದ ಸ್ಮಶಾನ ಭೂಮಿಗಳಿಗೆ ಸರ್ಕಾರದ ಭೂಮಿ ಸಾಕಾಗುವುದಿಲ್ಲ ಎನ್ನುವ ಸತ್ಯವನ್ನು ಮನಗಂಡು ಭೂಮಿ ಖರೀದಿಗೆ 10 ಕೋಟಿ.
= ಧಾರ್ಮಿಕ ಅಲ್ಪಸಂಖ್ಯಾತರಿಗೆ ಬಲ ತುಂಬಲು 110 ಕೋಟಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಚೇರಿಗಳು 23 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇನ್ನುಳಿದ 7 ಜಿಲ್ಲೆಗಳಲ್ಲಿ ಪ್ರಾರಂಭ.
= ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಲ್ಪಸಂಖ್ಯಾತರ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ವೇತನ ಹೆಚ್ಚಳ.
= ಅನುದಾನಿತ ವಸತಿ ನಿಲಯಗಳ ಆಹಾರದ ವೆಚ್ಚ ಹೆಚ್ಚಳ, ಆದಾಯ ಮಿತಿಯಲ್ಲಿಯೂ ಸಡಿಲಿಕೆ.
= ಅನಾಥ ಹಾಗೂ ಶಾಲೆ ಬಿಟ್ಟ ಮಕ್ಕಳ ಕಲ್ಯಾಣಕ್ಕಾಗಿ ಶ್ರಮವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ಸರ್ಕಾರದಿಂದ ನೀಡುತ್ತಿರುವ ನೆರವು ಹೆಚ್ಚಳ.
= ಇ-ಶಿಕ್ಷಣದ ಅಡಿಯಲ್ಲಿ ಕಲಿಕೆ, ಬೋಧನೆ ಮತ್ತು ಗಣಕಯಂತ್ರ ತರಬೇತಿಗಾಗಿ 100 ಅಲ್ಪಸಂಖ್ಯಾತ ಶಾಲೆಗಳಿಗೆ 1.5 ಕೋಟಿ ಅನುದಾನ.
= ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ಐಎಎಸ್, ಕೆಎಎಸ್ ಮತ್ತು ಪೊಲೀಸ್ ನೇಮಕಾತಿ ತರಬೇತಿಗಾಗಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ.
= ವಿಶೇಷ ಅಭಿವೃದ್ಧಿ ಯೋಜನೆ(ಎಸ್ಡಿಪಿ) ಅಡಿಯಲ್ಲಿ ಹಾಸ್ಟೆಲ್, 50 ಹೊಸ ಮೆಟ್ರಿಕ್ ನಂತರ ವಸತಿ ನಿಲಯ.
= 6.20 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳೊಂದಿಗೆ 124 ಅಲ್ಪಸಂಖ್ಯಾತ ವಸತಿ ನಿಲಯಗಳನ್ನು ಆಧುನೀಕರಣ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement