ಗೊಂದಲ ನಿವಾರಿಸಿ
ಗುಲ್ಬರ್ಗ: 371(ಜೆ) ಅಡಿಯಲ್ಲಿ ವಾಸಸ್ಥಳ ಪ್ರಮಾಣ ಪತ್ರದ ಗೊಂದಲ ನಿವಾರಣೆ ಮಾಡಬೇಕೆಂದು ಹೈದ್ರಾಬಾದ್ ಕರ್ನಾಟಕ ಯುವ ಹೋರಾಟ ಸಮಿತಿಯ ಅಧ್ಯಕ್ಷ ಡಾ. ರಾಜು ಕುಳಗೇರಿ ಒತ್ತಾಯಿಸಿದ್ದಾರೆ.
ರಾಜ್ಯದ ಆರು ಹೊಸ ಮೆಡಿಕಲ್ ಕಾಲೇಜುಗಳಿಗೆ ವಿವಿಧ ಹುದ್ದೆಗಳ ಭರ್ತಿಗಾಗಿ ಈಗಾಗಲೇ ಅರ್ಜಿ ಅಹ್ವಾನಿಸಿ ಫೆ.24 ರಂದು ಸಂದರ್ಶನವಿದೆ. ವಾಸಸ್ಥಳ ಪ್ರಮಾಣ ಪತ್ರದ ಗೊಂದಲ ನಿವಾರಿಸದಿದ್ದರೆ ವಿದ್ಯಾರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ತುಂಬಾ ತೊಂದರೆಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಅಥವಾ ಬಹಿರಂಗವಾಗಿ ಪತ್ರಿಕೆಯ ಮೂಲಕ ಪ್ರಕಟಣೆ ಹೊರಡಿಸಿ ಗೊಂದಲ ನಿವಾರಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.