ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ನಗುವಿನಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ'

Mainashree
Updated On : 17 Feb 2014, 10:53 am

ಜೇವರ್ಗಿ: ಜನನ ಮತ್ತು ಮರಣದ ಮಧ್ಯೆ ಇರುವ ಬದುಕಿನಲ್ಲಿ ಮಾನಸಿಕ ಒತ್ತಡಗಳ ನಿವಾರಣೆಗೆ ಮುಕ್ತ ಮನಸ್ಸಿನಿಂದ ನಗುವುದೇ ಪರಿಹಾರ. ಆ ನಿಟ್ಟಿನಲ್ಲಿ ನಾಡಿನ ಖ್ಯಾತ ಹಾಸ್ಯ ಕಲಾವಿದರು ನಡೆಸಿಕೊಡುವ ನಗೆಹಬ್ಬದಲ್ಲಿ ಭಾಗವಹಿಸುವುದು ಅಗತ್ಯವೆಂದು ತಹಶೀಲ್ದಾರ ಮಲ್ಲಿಕಾರ್ಜುನರೆಡ್ಡಿ ಪಾಟೀಲ್ ಹೇಳಿದರು.
ಅವರು ಪಟ್ಟಣದ ಮಹಬೂಬ್ ಫಂಕ್ಷನ್ ಹಾಲ್ನಲ್ಲಿ ಎಸ್ಪಿಎನ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ನಗೆಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬದುಕನ್ನು ಸಂತೋಷದಿಂದ ಕಳೆಯಬೇಕಾದರೆ ತಮ್ಮ ಕಷ್ಟ ಸುಖಗಳನ್ನು ಆಪ್ತರ ಎದುರು ಹೇಳಿಕೊಳ್ಳಬೇಕು. ಚಿಂತೆಯನ್ನು ದೂರ ಮಾಡಿಕೊಳ್ಳಲು ಹಾಗೂ ಎಲ್ಲರೊಂದಿಗೆ ಬೆರೆಯಲು ನಗೆ ಹಬ್ಬದಂಥ ಕಾರ್ಯಕ್ರಮಗಳು ಅಗತ್ಯವೆಂದು ಪಾಟೀಲ್ ತಿಳಿಸಿದರು.  ಮುಖ್ಯ ಅತಿಥಿಗಳಾಗಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಮುಖಂಡ ರಮೇಶಬಾಬು ವಕೀಲ್ ಆಗಮಿಸಿದ್ದರು.  ಹಾಸ್ಯ ಕಲಾವಿದರಾದ ಪ್ರಾಣೇಶ ಬೀಚಿ, ಬಸವರಾಜ ಮಹಾಮನಿ, ಡಾ.ಬಸವರಾಜ ಬೆಣ್ಣೆ ತಮ್ಮ ಹಾಸ್ಯ ಚಟಾಕಿಗಳಿಂದ ಪಟ್ಟಣದ ಜನತೆಯನ್ನು ಸುಮಾರು ಮೂರು ಗಂಟೆಗಳ ಕಾಲ ನಗೆಗಡಲಲ್ಲಿ ತೇಲಿಸಿದರು.
ಜೇವರ್ಗಿ ಪಟ್ಟಣದ ಮಹಬೂಬ್ ಫಂಕ್ಷನ್ ಹಾಲ್ನಲ್ಲಿ ಎಸ್ಪಿಎನ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ನಗೆ ಹಬ್ಬ ಕಾರ್ಯಕ್ರಮವನ್ನು ತಹಶೀಲ್ದಾರ್ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ್ ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement