ಮೋದಿ ರ್ಯಾಲಿ ಯಶಸ್ಸಿಗೆ ಸಂಘಟಿತರಾಗಿ: ಪಾಟೀಲ್
ಗುರುಮಠಕಲ್: ಗುಲ್ಬರ್ಗ ಜಿಲ್ಲೆಯಲ್ಲಿ ಫೆ.28 ರಂದು ನಡೆಯುವ ಮೋದಿ ರ್ಯಾಲಿಗೆ ಗುರುಮಠಕಲ್ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸುಗೊಳಿಸಲು ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಬೇಕೆಂದು ಎಂಎಲ್ಸಿ ಅಮರನಾಥ ಪಾಟೀಲ್ ಕರೆ ನೀಡಿದರು. ಪಟ್ಟಣದ ಖಾಸಾಮಠ ಅವರಣದಲ್ಲಿ ಮೋದಿ ರ್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕೆಜಿಪಿ ಪಕ್ಷ ಹಾಗೂ ಬಿಜೆಪಿ ಪಕ್ಷ ಕಾರ್ಯಕರ್ತರು ಎಂಬ ಗೊಂದಲದಲ್ಲಿ ಇರದೇ ಎಲ್ಲರೂ ಒಂದಾಗಿ ನರೇಂದ್ರ ಮೋದಿ ರ್ಯಾಲಿಯನ್ನು ಯಾರೂ ಮಾಡಲಾರದಂತೆ ಮಾಡಿ ತೋರಿಸಲು ಪ್ರಯತ್ನಿಸೋಣ ಎಂದು ತಿಳಿಸಿದರು.
ಹಿರಿಯ ಮುಖಂಡ ವೆಂಕಟರೆಡ್ಡಿ ಮುದ್ನಾಳ್, ಬಿಜೆಪಿ ಬ್ಲಾಕ್ ಅಧ್ಯಕ್ಷ ಕೆ. ದೇವದಾಸ್, ಶರಣಗೌಡ ಬಾಡಿಯಾಲ್ ಮಾತನಾಡಿದರು. ನಾಗರತ್ನಕುಪ್ಪಿ, ವೆಂಕಟರೆಡ್ಡಿ ವಡಾವಟಿ, ಡಾ. ಶರಣಗೌಡ ಕೋಡ್ಲಾ, ವೆಂಕಪ್ಪ ಮನ್ನೆ, ಭೀಮು ರಾಠೋಡ್, ಬಸವನಗೌಡ ಎಲ್ಹೇರಿ, ನವಿತಾ ಕಂದೂರ್, ವೀರಮಣಿ, ರಾಜರಾಜೇಶ್ವರ ರೆಡ್ಡಿ, ವಿಶ್ವನಾಥಗೊಲ್ಲ, ಚಂದುಲಾಲ್ ಚೌದ್ರಿ, ಪ್ರಭುಮುತ್ತಿಗಿ, ನರಸಿರೆಡ್ಡಿ ಶಿವರೆಡ್ಡಿ, ಪ್ರವೀಣ ಕಾಕಾಲವಾರ್ ಇತರರು ಇದ್ದರು.