ವರದಕ್ಷಿಣೆ ಕಿರುಕುಳ; ಮಹಿಳೆ ಆತ್ಮಹತ್ಯೆ
ಶಹಾಪುರ: ತಾಲೂಕಿನ ಅರಳಳ್ಳಿ ಗ್ರಾಮದಲ್ಲಿ 21ವರ್ಷದ ಮಹಿಳೆ ದ್ಯಾವಮ್ಮ ಗಂಡ ಸಿದ್ದಪ್ಪ ಶನಿವಾರ ಬೆಳಗ್ಗೆ ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಜೇವಗರ್ ತಾಲೂಕಿನ ಕಡಕೋಳ ಗ್ರಾಮ ಈಕೆಯ ತವರು ಮನೆ ಆಗಿದ್ದು, ಕಳೆದ ಹತ್ತು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆ ಇನ್ನಿತರ ಕಿರುಕುಳದಿಂದ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ದಾಖಲಾಗಿದೆ. ಆಕೆಯ ಅತ್ತೆ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಭೀ.ಗುಡಿ ಠಾಣೆ ಪಿಐ ಸಂತೋಷ ಬನ್ನಟ್ಟಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.