ವಾಡಿಯಲ್ಲಿ ನಡೆದ ಆಹಾರ ಅದಾಲತ್
ಶಹಾಬಾದ್: ಪಟ್ಟಣದ ನ್ಯಾಯಬೆಲೆ ಅಂಗಡಿ ಸಂಖ್ಯೆ 180 ರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಆಹಾರ ಅದಾಲತ್ನ್ನು ಇತ್ತೀಚೆಗೆ ನಡೆಸಲಾಯಿತು.
ಆಹಾರ ಇಲಾಖೆ ಸಹಾಯಕ ನಿರ್ದೇಶಕ ಹಣಮಂತಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜನಸಾಮಾನ್ಯರಿಗಾಗಿ ಆಹಾರ ಭದ್ರತೆ ಕಾಯ್ಕೆಯನ್ನು ಜಾರಿಗೆ ತಂದಿದ್ದು, ಅದನ್ನು ಜನರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ಆಹಾರ ನಿರೀಕ್ಷಕ ಸಿದ್ದಲಿಂಗಯ್ಯ ಸ್ವಾಮಿ, ನೋಡಲ್ ಅಧಿಕಾರಿ ಅನೀಲ ಎಸ್. ಲಚ್ಚಾ, ಶಹಾಬಾದ್ ವಾಡಿ ನ್ಯಾಯ ಬೆಲೆ ಅಂಗಡಿಗಳ ಸಂಘದ ಅಧ್ಯಕ ಇಬ್ರಾಹಿಂ ನಾಗೂರೆ ಖಾನ್, ಶೇಖಪ್ಪ ಎನ್. ಶಂಕು, ವಿದ್ಯಾಶ್ರೀ, ಪ್ರಿಯಂಕ ರಾಠೋಡ, ಸಂಗೀತಾ ಎಸ್ ಸೇರಿದಂತೆ ನ್ಯಾಯಬೆಲೆ ಅಂಡಿಗಳ ಫಲಾನುಭವಿಗಳು ಉಪಸ್ಥಿತರಿದ್ದರು.