ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಮುದಾಯ ಸಹಭಾಗಿತ್ವ ಅಗತ್ಯ

Mainashree
Updated On : 17 Feb 2014, 10:58 am

ಶಹಾಪುರ: ಮುಂದಿನ ಭರವಸೆಯ ಕುಸುಮದಂತಿರುವ ವಿದ್ಯಾರ್ಥಿಗಳ ವಿಕಾಸಕ್ಕೆ ಸಮುದಾಯದ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ. ರಾಯಪ್ಪರೆಡ್ಡಿ ತಿಳಿಸಿದರು.
   ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸಂಪನ್ಮೂಲ ಕೇಂದ್ರ ಉಕ್ಕಿನಾಳ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೊರಿಗುಡ್ಡ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಾಲಾ ದತ್ತು ಯೋಜನೆ ಮತ್ತು ಎಸ್‌ಡಿಎಂಸಿ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಗುಟಮಟ್ಟ ಸುಧಾರಣೆಯಾಗಿ ಪ್ರಸ್ತುತ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಪೈಪೋಟಿ ನೀಡುವಂತಾಗಲು ಶಿಕ್ಷಕರು, ಪೋಷಕರು, ಸರ್ಕಾರ ಮತ್ತು ಸಮುದಾಯದವರ ಕಳಕಳಿ ಅಗತ್ಯವಾಗಿದೆ. ಈ ದಿಸೆಯಲ್ಲಿ ದೊರಿಗುಡ್ಡ ಶಾಲೆಯ ಎಸ್‌ಡಿಎಂಸಿ ಮೇಳ ಶಾಲಾದತ್ತು ಸ್ವೀಕಾರ ಯೋಜನೆ ಶಾಲೆಗೆ ದಾನಿಗಳಿಂದ ಸಹಕಾರ ಇದು ಸರ್ವರು ಮೆಚ್ಚುವಂಥ ಕಾರ್ಯವಾಗಿದೆ ಎಂದರು.
  ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಹೆಚ್ಚುವಂಥ ಕಲಿಕಾ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಉಕ್ಕಿನಾಳ ವ್ಯಾಪ್ತಿಯಲ್ಲಿ ವಿದ್ಯಾಥರ್‌ಗಳು ಶಾಲೆಯಿಂದ(ಕಲಿಕೆಯಿಂದ) ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
 ಸಿಆರ್‌ಪಿ ರಾಯಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಇಲಾಖೆಯ ರುದ್ರೇಶ, ಶಂಕರ ಚವ್ಹಾಣ ಮತ್ತು ಕ.ರಾ.ಪ್ರಾ. ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜಯಾಳಗಿ ಎಚ್.ಬಿ. ಪಾಟೀಲ, ವೀರಯ್ಯ. ಡಿ. ಮಠಪತಿ ಜಾನಕಿ ಮತ್ತು ಉಕ್ಕಿನಾಳ ದರ್ಶನಾಪುರ ಸಮೂಹ ಕೇಂದ್ರದ ಮುಖ್ಯಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ದೊರಿಗುಡ್ಡ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮುರುಗೇಂದ್ರ ನಿರೂಪಿಸಿದರು. ರಾಠೋಡ ಸ್ವಾಗತಿಸಿದರು, ಪ್ರಭುಗೌಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement