ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸ್ಥಳೀಯರಿಗೆ ಉದ್ಯೋಗ ನೀಡಿ

Mainashree
Updated On : 17 Feb 2014, 10:57 am

ಸೈದಾಪುರ: ಇಲ್ಲಿಗೆ ಸಮೀಪದ ಬಾಡಿಯಾಲ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ. ಮರಿಯಪ್ಪ, ಮಾಜಿ ಜಿಪಂ ಸದಸ್ಯರಾದ ಸರಸ್ವತಿ ಕೆ.ಮರಿಯಪ್ಪ, ಬಿ. ದೇವಿಂದ್ರಪ್ಪ ಹಾಗೂ ಬಾಡಿಯಾಲ ಗ್ರಾಪಂ ಅಧ್ಯಕ್ಷರಾದ ಬಾಲಯ್ಯ ಮಕ್ತಲ ಇವರುಗಳು ಯಾದಗಿರಿಯಲ್ಲಿ ರೇಲ್ವೆ ಇಲಾಖೆಯಿಂದ ಆಯೋಜಿಸಿದ್ದ ಫಿಯೆಟ್ ಬೋಗಿಗಳ ಉತ್ಪಾದನಾ ಕಾರ್ಖಾನೆ ನಿರ್ಮಾಣ ಶಂಕುಸ್ಥಾಪನೆಯಲ್ಲಿ ಭಾಗವಹಿಸಿದ ಮಲ್ಲಿಕಾರ್ಜುನ ಖರ್ಗೆಗೆ ಸನ್ಮಾನಿಸಿ, ಹಿಂದುಳಿದ ಗಡಿ ಭಾಗದ ಅಭಿವೃದ್ಧಿಗಾಗಿ ಬಾಡಿಯಾಲ ಗ್ರಾಮದಲ್ಲಿ ರೇಲ್ವೆ ಬೋಗಿ ತಯಾರಿಕೆ ಘಟಕ ಪ್ರಾರಂಭಿಸುತ್ತಿರುವುದು ಶ್ಲಾಘನಿಯ. ಇದರಿಂದ ಈ ಭಾಗದ ಪ್ರಗತಿಗೆ ನೆರವಾದಂತಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಇದಕ್ಕಾಗಿ ನೀಡಲಾದ ರೈತರ ಜಮೀನಿಗೆ ಉತ್ತಮ ಬೆಲೆ ದೊರೆಯುವಂತೆ ರಾಜ್ಯ ಸರ್ಕಾರಕ್ಕೆ ಸಿಪಾರಸ್ಸು ಮಾಡಬೇಕು ಹಾಗೂ ಇತರೆ ಮೂಲ ಅನುಕೂಲತೆಗಳನ್ನು ಕಲ್ಪಿಸಲು ಮನವಿ ಸಲ್ಲಿಸಿದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಾಬುರಾವ ಚಿಂಚನಸೂರ ಇದಕ್ಕಾಗಿ ಹೆಚ್ಚಿನ ಪ್ರಯತ್ನ ಮಾಡಬೇಕೆಂದು ಕೋರಿದ್ದಾರೆ.
ಇಂದು ಕಾರ್ಯಕ್ರಮ
ಶಹಾಪುರ: ಸಾಮಾಜಿಕ ಹಾಗೂ ಧಾರ್ಮಿಕ ಜಾಗೃತಿ ಮೂಡಿಸಲು ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ 17 ರಂದು ಸೋಮವಾರ ಸಂಜೆ ಅಂಜುಮನ್ ಹಯಾತ್‌ನ ಉದರ್ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಮುಖ ಮುಖಂಡರು ಭಾಗವಹಿಸಿ ಮಾತನಾಡಲಿದ್ದಾರೆ. ಸರ್ವರು ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement