ಅಂಚೆ ನೌಕರರ ಅನಿರ್ದಿಷ್ಟ ಅವಧಿ ಮುಷ್ಕರ ಆರಂಭ
ಕೆಂಭಾವಿ: ಪಟ್ಟಣದ ಅಂಚೆ ಕಚೇರಿಯಲ್ಲಿ ಅಖಿಲ ಭಾರತ ಅಂಚೆ ಗ್ರಾಮೀಣ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಹಲವಾರ ನೌಕರರು, ಗ್ರಾಮೀಣ ಭಾಗದಲ್ಲಿ ದುಡಿಯುತ್ತಿರುವ ಅಂಚೆ ನೌಕರರ ಸ್ಥಿತಿಗತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದೇವೆ.
ಆದರೆ ಸರ್ಕಾರ ಇದಕ್ಕೆ ಸ್ಪಂದಿಸದೆ ಇರುವುದರಿಂದ ಇಂದಿನಿಂದ ನಾವು ಈ ಮುಷ್ಕರ ನಡೆಸಬೇಕಾಗಿದ್ದು ಜಿಡಿಎಸ್ ನೌಕರರನ್ನು ಪೌರನೌಕರ ಎಂದು ಪರಿಗಣಿಸಬೇಕು. ಕೇಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ನಮ್ಮನ್ನು ಸೇರಿಸಬೇಕು. ಶೇ. 50ರಷ್ಟು ತುಟ್ಟಿಭತ್ಯೆ ವಿಲೀನ ಮಾಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ಆರಂಭಿಸಿದ್ದೇವೆ. ಕೇಂದ್ರ ಸರ್ಕಾರ ಇದಕ್ಕೆ ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ನೌಕರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗುರುಸ್ವಾಮಿ ಅಮಲಿಹಾಳ, ಯಮನಸಿಂಗ ಯಾಳಗಿ, ಗುರುನಾಥ ನಗನೂರ, ಶಾಂತಯ್ಯ ಮಾಲಗತ್ತಿ, ಸಾದಿಕ್ ಮದನೂರ, ಉದಯರಾವ ಕುಲಕಣರ್, ಶಮಶೀರ ಪೋಸ್ಟಮ್ಯಾನ್, ಬಸಲಿಂಗಪ್ಪ, ಸಂಗಯ್ಯ ಅರಕೇರಿ, ಬಸವರಾಜ ಆಲಹಾಳ ಸೇರಿದಂತೆ ಕೆಂಭಾವಿ ವ್ಯಾಪ್ತಿಯ ಅಂಚೆ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.