ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರಾವರಿ ಕಚೇರಿಗೆ ಬೀಗಮುದ್ರೆ

Vishwanath S
Updated On : 19 Feb 2014, 11:14 am

ಗುಲ್ಬರ್ಗ: ಬೆಣ್ಣೆತೋರಾ ಹಿನ್ನಿರಿನಿಂದ ಮುಳಗಡೆಯಾದ ಎಲ್ಲಾ ಪುನಾರ್ವಸತಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಮುಖ್ಯ ಅಭಿಯಂತರ ಜಿ. ದೇವರಾಜರನ್ನು ಸೇವೆಯಿಂದ ಅಮಾನತುಗೊಳಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುಲ್ಬರ್ಗ ನೀರಾವರಿ ಇಲಾಖೆ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ನಡೆಸಿ ಡಿಸಿ ಮುಖಾಂತರ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು.
ಚಿತ್ತಾಪುರ ತಾಲೂಕಿನ ಹೇರೂರ ಗ್ರಾಮದ ಹತ್ತಿರ ನಿರ್ಮಿಸಲಾದ ಬೆಣ್ಣೆತೋರಾ ಅಣೆಕಟ್ಟಿನ ಹಿನ್ನಿರಿನ ಮುಳಗಡೆಯಾದ ಕುರಿಕೋಟಾ, ಅಂಕಲಗಾ, ನಾಗೂರ, ಸಿರಗಾಪುರ, ಕಡಬೂರ, ತೊಂಡಕಲ್, ಹರಕಂಚಿ, ಯಂಕಚಿ ಈ ಎಲ್ಲಾ ಪುನಾರ್ವಸತಿ ಕೇಂದ್ರಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾದಂತಹ ನಿರಾಶ್ರಿತರ ಕೇಂದ್ರಗಳಿಗೆ ಹಾಗೂ ಪುರ್ನಾವಸತಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು.
ಅಂಕಲಾ ಗ್ರಾಮದ ಹೆಚ್ಚುವರಿ ಕುಟುಂಬಗಳಿಗೆ ನಿವೇಶನ ಒದಗಿಸಿ ಹಕ್ಕುಪತ್ರ ಕೊಡಬೇಕು. ಅಂಕಲಗಾ ಪುರ್ನಾವಸತಿ ಕೇಂದ್ರದ ಹತ್ತಿರ ಇರುವ ಜಮೀನಿನಲ್ಲಿ ಕರೆಯಲಾಗಿರುವ ಟೆಂಡರ್ ಕಾಮಗಾರಿ ಒಂದು ವಾರದೊಳಗೆ ಪ್ರಾರಂಭಿಸಬೇಕು. ಎಲ್ಲ ಪುರ್ನಾವಸತಿ ಕೇಂದ್ರಗಳಲ್ಲಿ ರುದ್ರಭೂಮಿ ಒದಗಿಸುವುದು. ಪುನಾರ್ವಸತಿ ಕೇಂದ್ರಗಳಿಗೆ ಗ್ರಾಮ ಸ್ಥಳಾಂತರಿಸಲು ವಾಹನಗಳ ಖರ್ಚು ಪ್ರತಿ ಹಕ್ಕುಪತ್ರಕ್ಕೆ 25 ನೀಡಿಕೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement