ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸ್ ನಿಲುಗಡೆಗೆ ಜೈ ಕರ್ನಾಟಕ ಸಂಘಟನೆ ಆಗ್ರಹ

Vishwanath S
Updated On : 19 Feb 2014, 11:15 am

ಸುರಪುರ: ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ. ಇದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿರುವುದರ ವಿರುದ್ಧ ಜೈ ಕರ್ನಾಟಕ ರಕ್ಷಣಾ ವೇದಿಕೆ ಮಂಗಳವಾರ ಹಸನಾಪುರ ಬಸ್ ಘಟಕದ ಮುಂದೆ ಪ್ರತಿಭಟನೆ ನಡೆಸಿತು.  
ತಾಲೂಕಿನ ದೇವರಗೋನಾಲ ಗ್ರಾಮ ದೊಡ್ಡ ಹೋಬಳಿ ಕೇಂದ್ರವಾಗಿದೆ. ಗ್ರಾಮದಿಂದ ಪ್ರತಿದಿನ ಶಾಲಾ ಕಾಲೇಜು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸುರಪುರಕ್ಕೆ ಬರುತ್ತಾರೆ. ಆದರೆ  ಬಸ್ ನಿಲುಗಡೆ ಮಾಡದಿರುವುದರಿಂದ ವಿದ್ಯಾರ್ಥಿಗಳು ಕ್ಲಾಸ್ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಗ್ರಾಮದ ಮೂಲಕ ಅನೇಕ ಬಸ್‌ಗಳು ಸಂಚರಿಸುತ್ತವೆ. ಆದರೆ ಕೆಲವನ್ನು ಹೂರತು ಪಡಿಸಿ ಉಳಿದ ಬಸ್‌ಗಳು ಇಲ್ಲಿ ನಿಲುಗಡೆಯಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಮುಖಂಡರು ದೂರಿದರು.
ದೇವರಗೋನಾಲ ಗ್ರಾಮದ ಮೂಲಕ ಸಂಚರಿಸುವ ಪ್ರತಿಯೊಂದು ಬಸ್ ಅನ್ನು ಇಲ್ಲಿ ನಿಲುಗಡೆ ಮಾಡಬೇಕು.  ಸಂಘಟನೆಯ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿ ಬಸ್ ಘಟಕದ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜೈಕರವೇ ತಾಲೂಕು ಅಧ್ಯಕ್ಷ ಶಿವಮೋನಯ್ಯ ಎಲ್‌ಡಿ ನಾಯಕ, ನಗರ ಘಟಕದ ಅಧ್ಯಕ್ಷ ಭೀಮುನಾಯಕ ಮಲ್ಲಿಬಾವಿ, ತಾಲೂಕು ಕಾರ್ಯಾಧ್ಯಕ್ಷ ವೆಂಕಟೇಶ ಕವಡಿಮಟ್ಟಿ, ರಂಗನಗೌಡ, ದೇವರಾಜ, ಇನ್ನಿತರರಿದ್ದರು.
ಸರಬರಾಜಾಗದ
ಪಿಯು ಪಠ್ಯಪುಸ್ತಕ: ಅಸಮಾಧಾನ
ಶಹಾಪುರ: ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸೇರಿ ಬೇಡಿಕೆಗಳ ಬಗ್ಗೆ ಮನವಿ ಮಾಡಿದ್ದರೂ, ಕೇವಲ ಆಶ್ವಾಸನೆಗಳು ಮಾತ್ರ ದೊರಕುತ್ತಿವೆ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲವೆಂದು ವಿದ್ಯಾರ್ಥಿ ಮೌನೇಶ ಕುಂಬಾರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೇವಲ ನಾಳೆ, ನಾಡಿದ್ದು ಎಂದು ಸುಳ್ಳು ಆಶ್ವಾಸನೆಗಳನ್ನು ನೀಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಮುಂದಿನ ವರ್ಷ ದ್ವಿತೀಯ ಪಿಯುಸಿ ಪಠ್ಯಕ್ರಮ ಬದಲಾಗುತ್ತಿದೆ. ಆದ್ದರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಹೊಣೆಗಾರರೇ. ಇದು ಎಷ್ಟರ ಮಟ್ಟಿಗೆ ಸರಿಯಾದ ಕ್ರಮ ಎಂಬುದು ತಿಳಿಯುತ್ತಿಲ್ಲ. ತಕ್ಷಣವೇ ಅಧಿಕಾರಿಗಳು ವಿದ್ಯಾಥರ್‌ಗಳ ಭವಿಷ್ಯದ  ದೃಷ್ಟಿಯಿಂದ ಕಾಳಜಿ ವಹಿಸಬೇಕೆಂದು ಮೌನೇಶ ಮನವಿ ಮಾಡಿದ್ದಾರೆ. ಕಸಾಪ ಶತಮಾನೋತ್ಸವಕ್ಕೆ ರು. 5 ಕೋಟಿ
ಗುರುಮಠಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟನಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಆಚರಣೆಗಾಗಿ ರು. 5 ಕೋಟಿ ನೀಡಿರುವುದನ್ನು ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಸ್ವಾಗತಿಸುತ್ತದೆ ಎಂದು ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದ ಪ್ರಕಾಶ ಅಂಗಡಿ ಕನ್ನಳ್ಳಿ ಅಭಿನಂದಿಸಿದ್ದಾರೆ. ಮೂಲತ ಕನ್ನಡ ಕಾವಲು ಪಡೆಯ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿರುವ ಸಿದ್ದರಾಮಯ್ಯ ಸಾಂಸ್ಕೃತಿಕ ಪ್ರೇಮವನ್ನು ಹೊಂದಿರುವ ಮುಖ್ಯಮಂತ್ರಿಗಳಾಗಿದ್ದಾರೆ. ಹಾಗಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಸಾಪ ಶತಮಾನೋತ್ಸವಕ್ಕೆ ಹಣ ಬಿಡುಗಡೆ ಹಾಗೂ ಪುಸ್ತಕ ಮುದ್ರಣಕ್ಕೆ ರು. 1ಕೋಟಿ ಹಾಗೂ ಕದಂಬ ಉತ್ಸವ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ಅನೇಕ ಸಾಹಿತ್ಯ ಪರವಾದ ಯೋಜನೆಗಳು ಹೊಂದಿವೆ ಎಂದು ಅಂಗಡಿ ಅಭಿಪ್ರಾಯ ಪಟ್ಟಿದ್ದಾರೆ.
ಆರ್‌ಡಿಪಿ: ಸಂದರ್ಶನಕ್ಕೆ ಆಹ್ವಾನ
ಗುರುಮಠಕಲ್: ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ವತಿಯಿಂದ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿಯುಳ್ಳ ಪದವೀಧರರಿಗೆ ಸಂದರ್ಶನವನ್ನು ಫೆ. 20ರಂದು ನಡೆಸಲಾಗುವುದು.  ಪಟ್ಟಣದ ಆರಾಧನಾ ಪಬ್ಲಿಕ್ ಶಾಲೆಯಲ್ಲಿ ಬೆಳಿಗ್ಗೆ 10ರಿಂದ 5ರವರೆಗೆ ನಡೆಯಲಿರುವ ಈ ಸಂದರ್ಶನದಲ್ಲಿ ಆಯ್ಕೆಯಾದವರಿಗೆ 8 ದಿನದ ಉಚಿತ ತರಬೇತಿ ನೀಡಲಾಗುವುದು. ನಂತರ ಇವರಿಗೆ ಪ್ರೋತ್ಸಾಹ ಧನ ಸಹ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9986775286, 8722222159 ಮತ್ತು 9742956650ಕ್ಕೆ ಸಂಪರ್ಕಿಸಬಹುದು.
ಈರಣ್ಣ ದೊಡ್ಮನಿಗೆ ಸನ್ಮಾನ
ಶಹಾಪುರ: ವಿವಿಧೆಡೆ ಪೋಲಿಸ್ ಇಲಾಖೆಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಸೈದಾಪುರ ಸ್ಟೇಷನ್‌ನಿಂದ ರಾಯಚೂರು ಜೆಸ್ಕಾಂಗೆ ಸಿಪಿಐ ಆಗಿ ಅಧಿಕಾರ ವಹಿಸಿಕೊಂಡ ಈರಣ್ಣ ದೊಡ್ಮನಿಯವರಿಗೆ ದೋರನಹಳ್ಳಿ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೋರನಹಳ್ಳಿಯ ಮುಖಂಡರಾದ ಭೀಮಾಶಂಕರ ಅಣಬಿ, ಹೈಯಾಳಪ್ಪ ಗುಂಟ್ನೂರು, ಸಿದ್ದು ವಕೀಲರು, ಮಾನಪ್ಪಗುಂಡಗುತರ್, ಹೈಯಾಳಪ್ಪ ದೊಡ್ಮನಿ, ದೇವಿಂದ್ರಪ್ಪಸಗರ, ವಿರೇಶಕಂಪ್ಲಿ, ಮಹಾದೇವಪ್ಪ ಹುಡೇದ, ಗಂಟೆಪ್ಪನಾಟೇಕಾರ ಇತರರು ಇದ್ದರು.
ಶಿವಾಜಿ ಜಯಂತಿ ಇಂದು
ಯಾದಗಿರಿ: ಜಿಲ್ಲಾ ಆಡಳಿತದ ವತಿಯಿಂದ ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರದಲ್ಲಿ ಆಚರಿಸಲಾಗುತ್ತಿದೆ.  ಅಂದು ಬೆಳಿಗ್ಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಯಾದಗಿರಿ ಶಾಸಕ ಮಾಲಕರೆಡ್ಡಿ ಅಧ್ಯಕ್ಷತೆ ವಹಿಸುವರು. ರಾಯಚೂರು ಲೋಕಸಭಾ ಸದಸ್ಯರಾದ ಎಸ್. ಫಕೀರಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭೀಮಮ್ಮ ಕೃಷ್ಣ ಚೆಪೇಟ್ಲಾ ಸೇರಿದಂತೆ ಶಾಸಕರು, ವಿಧಾನಸಭಾ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು, ಗಣ್ಯರು ಉಪಸ್ಥಿತರಿರುವರು.
ಅಂಚೆ ನೌಕರರ ಪ್ರತಿಭಟನೆ
ಸುರಪುರ: ಇಲ್ಲಿಯ ಮುಖ್ಯ ಅಂಚೆ ಕಚೇರಿಯ ಆವರಣದಲ್ಲಿ ಗ್ರಾಮೀಣ ಅಂಚೆ ಪಾಲಕರು ಮತ್ತು ಇಲಾಖೇತರ ಅಂಚೆ ನೌಕರರು ತಮ್ಮ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು. 7ನೇ ವೇತನ ಆಯೋಗದ ಶಿಫಾರಸ್ಸಿನಲ್ಲಿ ಗ್ರಾಮೀಣ ಅಂಚೆ ನೌಕರರನ್ನು ಸೇರಿಸಿ ವರದಿ ಸಲ್ಲಿಸಬೇಕು. ಶೇ.100 ರಷ್ಟು ತುಟ್ಟಿಭತ್ಯೆಯನ್ನು ಕನಿಷ್ಠ ಶೇ.60 ರಷ್ಟು ಮೂಲ ವೇತನಕ್ಕೆ ವಿಲೀನಗೊಳಿಸಬೇಕು. ಗ್ರಾಮೀಣ ಅಂಚೆ ನೌಕರರನ್ನು ಇಲಾಖೆ ನೌಕರರಂತೆ ಪರಿಗಣಿಸಬೇಕು. ಸೇವೆಯಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲೂಕಿನಲ್ಲಿ ಅಂಚೆ ನೌಕರರ ಅನಿರ್ದಿಷ್ಟಾವಧಿಯ ಪ್ರತಿಭಟನೆಯಿಂದಾಗಿ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶದಲ್ಲಿ ಅಂಚೆ ಸೇವೆಗಳಿಗೆ ತೊಂದರೆಯಾದವು. ಪ್ರತಿಭಟನೆಯಲ್ಲಿ ಬಿಪಿಎಂಗಳಾದ ದೇವಿಂದ್ರಪ್ಪ ಹುಣಸಿಹೊಳೆ, ಶರಣಯ್ಯ ತಿಂಥಣಿ, ನೀಲಕಂಠರಾಯ ಸೂಗೂರು, ಶಿವಕುಮಾರ ಅಮ್ಮಾಪುರ, ಹಣಮಂತ ಬಿಜಾಸ್ಪೂರುಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement