ಸಾರಿಗೆ ನೌಕರರ ಸಹಕಾರ ಸಂಘಕ್ಕೆ ಆಯ್ಕೆ; ಸಂಭ್ರಮ
ಜೇವರ್ಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗುಲ್ಬರ್ಗ ಆಡಳಿತ ಮಂಡಳಿ ಚುನಾವಣೆಯಲ್ಲಿ ರಾಜ್ಯ ಸಾರಿಗೆ ನೌಕರರ ಸಂಘದ ಗುಲ್ಬರ್ಗ ವಿಭಾಗದಿಂದ ಚಂದ್ರಕಾಂತ ಡೊಳ್ಳೆ ಪೆನಾಲ್‌ನಲ್ಲಿದ್ದ ಆಯ್ಕೆಯಾದ ಸಂಸ್ಥೆಯ 9 ಸದಸ್ಯರಿಗೆ ಜೇವರ್ಗಿ ಸಾರಿಗೆ ಘಟಕದ ಕಾರ್ಮಿಕ ನೌಕರರಿಂದ ಸನ್ಮಾನಿಸಿ ಗೌರವಿಸುವುದರೊಂದಿಗೆ ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದಲ್ಲಿ ಸಂಸ್ಥೆಯ ಸಿಬ್ಬಂದಿ ಗುರುದೇವ ಕೌಲಗಿ, ಲಕ್ಷ್ಮೀಕಾಂತ್ ರಾಯ್, ಲಿಂಬುನಾಯಕ್, ಲಕ್ಷ್ಮೀಕಾಂತ ಹರವಾಳ, ಶಿವಣ್ಣಗೌಡ ಹರನಾಳ, ಹಯ್ಯಾಳಪ್ಪ ಮಾನಶಿವಣಗಿ, ದೇವಿಂದ್ರಪ್ಪ ವರವಿ, ಲಕ್ಷ್ಮಣ ನಂದಿಹಳ್ಳಿ, ಕಲ್ಲಪ್ಪ ಡ್ರೈವರ್, ಅಂಬರೀಶ ಹಂಚಿನಾಳ, ಬಸವರಾಜ ದೇಸಣಗಿ, ಈರಣ್ಣ ಕಕ್ಕಳಮೇಲಿ, ನಾನಾಗೌಡ ಕುರನಳ್ಳಿ, ಲಕ್ಕಪ್ಪಗೌಡ ಮತ್ತಿತರರು ಇದ್ದರು.