ನಾಳೆ ಸಂತ ಸೇವಾಲಾಲ್ ಜಯಂತ್ಯುತ್ಸವ
ಚಿತ್ತಾಪುರ: ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ವತಿಯಿಂದ ಬಂಜಾರ ಸಮಾಜದ ಅರಾಧ್ಯದೈವ ಸಂತ ಸೇವಾಲಾಲ ಮಹಾರಾಜರ 275ನೇ ಜಯಂತ್ಯೋತ್ಸವದ ಧಾರ್ಮಿಕ ಸಭೆ ಫೆ.22ರಂದು ಪಟ್ಟಣದ ಅಡತ ಬಜಾರ್ ಶಾಲಾವರಣದಲ್ಲಿ ಮ.2ಕ್ಕೆ ನಡೆಯಲಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪೋಮು ರಾಠೋಡ, ಪ್ರಧಾನ ಕಾರ್ಯದರ್ಶಿ ಗೋಪಾಲ್ ರಾಠೋಡ ತಿಳಿಸಿದ್ದಾರೆ. ಅಂದು ಬೆ.9ಕ್ಕೆ ಪಟ್ಟಣದ ಸ್ಟೇಷನ್ ತಾಂಡಾದ ಸೇವಾಲಾಲ ಜಗದಂಬಾ ದೇವಸ್ಥಾನದಿಂದ ಬೃಹತ್ ಮೆರವಣಿಗೆಯು ಒಂಟಿ ಕಮಾನ್, ನಾಗಾವಿ ಚೌಕ್, ಜನತಾ ಚೌಕ್, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಮ.2ಕ್ಕೆ ಸಮಾರಂಭ ನಡೆಯುವ ಅಡತ್ ಬಜಾರ್ ಶಾಲಾವರಣ ತಲುಪಲಿದೆ ಎಂದಿದ್ದಾರೆ. ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಜ್ಯೋತಿ ಬೆಳಗಿಸುವರು. ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸುವರು. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆ ವಹಿಸುವರು. ಜಗದ್ಗುರು ಡಾ. ರಾಮರಾವ ಮಹಾರಾಜರು ದಿವ್ಯ ಪ್ರಕಾಶನದಲ್ಲಿ, ಡಾ. ಸಿದ್ಧ ತೋಟೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿರುವರು. ಮುಗಳನಾಗಾಂವ ಜೇಮಸಿಂಗ್ ಮಹಾರಾಜರ ನೇತೃತ್ವದಲ್ಲಿ ಹಾಗೂ ಸೋಮಶೇಖರ ಶಿವಾಚಾರ್ಯರು ಕಂಬಳೇಶ್ವರ ಮಠ ಚಿತ್ತಾಪುರ, ಪರವತಲಿಂಗ ಪರಮೇಶ್ವರ ಮಹಾರಾಜರು ಬೆಡಸೂರ ಸೇರಿದಂತೆ ಇನ್ನಿತರರು ಇರುವರು.