ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಂಗಾರು, ಹಿಂಗಾರಿನಲ್ಲಿ ಸಾಧನೆ

Lingaraj Badiger
Updated On : 21 Feb 2014, 11:48 am

ಚಿಂಚೋಳಿ: ತಾಲೂಕಿನಲ್ಲಿ ಕೃಷಿ ಇಲಾಖೆಯಿಂದ ಹಿಂಗಾರು ಮತ್ತು ಮುಂಗಾರಿನಲ್ಲಿ ನಿಗದಿತ ಗುರಿ ಸಾಧಿಸಿದ್ದು, ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ ಹೇಳಿದರು.
ಪಟ್ಟಣದ ಚಂದಾಪುರ ಸರ್ಕಾರಿ ಬೀಜೋತ್ಪಾದನಾ ಕೇಂದ್ರದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 2013- 14ನೇ ಸಾಲಿನ ಸಮಿತಿ ಸಮಾಲೋಚನೆ ಯೋಜನೆ ಅಡಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಮಾಲೋಚನೆಯಲ್ಲಿ ಅವರು ಮಾತನಾಡಿದರು.
ರಿಯಾಯ್ತಿಯಲ್ಲಿ ಕೃಷಿ ಯಂತ್ರೋಪಕರಣ: ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಿ ಬೆಳೆದ ಸಂದರ್ಭದಲ್ಲಿ ಮಂಜಿನಿಂದಾಗಿ ರೈತರ ತೊಗರಿ, ಕಡಲೆ, ಕುಸುಬೆ ಬೆಳೆಗಳು ಹಾನಿಯಾಗಿವೆ. ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ವರ್ಷ ಸೋಯಾಬಿನ್ ಬೆಳೆಯನ್ನು ಅಧಿಕವಾಗಿ ಹಬೆಳೆದಿದ್ದಾರೆ. ಸರ್ಕಾರ ಪ್ರಸಕ್ತ ಸಾಲಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಚುನಾಯಿತ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ರೈತರಿಗೆ ಮಾಹಿತಿ ನೀಡಬೇಕೆಂದು ಸಹಾಯಕ ಕೃಷಿ ನಿರ್ದೇಶಕಿ ಜಾನಕಿಬಾಯಿ ಬಳವಾಟ ತಿಳಿಸಿದರು.
ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಮಾತನಾಡಿದರು. ತಾಪಂ ಅಧ್ಯಕ್ಷೆ ತಾರಾಮತಿ ಕುಂಬಾರ ಅಧ್ಯಕ್ಷತೆ ವಹಿಸಿದರು. ಜಿಪಂ ಸದಸ್ಯ ಸಂಜೀವನ್ ಯಾಕಾಪೂರ, ಪಪಂ ಉಪಾಧ್ಯಕ್ಷ ಶಾಮರಾವ ಕೊರವಿ, ತಾಪಂ ಸದಸ್ಯರಾದ ಮಲ್ಲಮ್ಮ ಪಾಟೀಲ್, ಬಸ್ಸಯ್ಯ ಸ್ವಾಮಿ ಕೆರೋಳಿ, ನರಸಿಂಹಲು ಕುಂಬಾರ, ಜಾನು ರಾಠೋಡ್, ಮಹೇಶಪ್ಪ ದೊಡ್ಡಿ, ವಿಠಲ್ ಜಾಧವ್ ಇತರರು ಭಾಗವಹಿಸಿದರು. ಉದಯಶಂಕರ ಸ್ವಾಗತಿಸಿದರು. ಸುರೇಶ ದೇಶಪಾಂಡೆ ನಿರೂಪಿಸಿದರು. ಮಾಣಿಕರಾವ ಮಾನೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement